ಜಿಲ್ಲೆಯಲ್ಲಿ ಬ್ರಹ್ಮಚಾರಿಣಿ ದೇವಿಯ ಆರಾಧನೆ

04 MANJU 03
Published on

ಹೊಸಪೇಟೆ: ನವರಾತ್ರಿ ಎರಡನೇ ದಿನದ ನಿಮಿತ್ತ ಹಂಪಿ ವಿರೂಪಾಕ್ಷೇಶ್ವರ ದೇಗುದಲ್ಲಿನ ಪಂಪಾ ದೇವಿ ಹಾಗೂ ತಾಯಿ ಭುವನೇಶ್ವರಿ ಸೇರಿದಂತೆ ಜಿಲ್ಲೆಯಲ್ಲಿ ದೇವಿ ದೇಗುಲಗಳಲ್ಲಿ ಬ್ರಹ್ಮಚಾರಿಣಿ ಅವತಾರದ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಸಲಾಯಿತು.

ನವದುರ್ಗೆಯ 9 ಅವತಾರಗಳಲ್ಲಿ ಬ್ರಹ್ಮಚಾರಿಣಿ ಎರಡನೇ ಅವತಾರವಾಗಿದೆ. ನವರಾತ್ರಿಯ ಎರಡನೇ ದಿನ ಅವಳನ್ನು ಇಷ್ಟವಾದ ಮಲ್ಲಿಗೆ ಹೂವಿನಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಅವಳು ತನ್ನ ಸರ್ವಜ್ಞ ಜ್ಞಾನವನ್ನು ನೀಡುವ ಮೂಲಕ ತನ್ನ ಭಕ್ತರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. ಬ್ರಹ್ಮಚಾರಿಣಿಯ ರೂಪವು ತುಂಬಾ ಸರಳ ಮತ್ತು ಭವ್ಯವಾಗಿದೆ. ಇತರ ದೇವತೆಗಳಿಗೆ ಹೋಲಿಸಿದರೆ, ದೇವಿಯು ಸೌಮ್ಯ, ಕೋಪ ಮುಕ್ತ ಮತ್ತು ಶೀಘ್ರವಾಗಿ ವರವನ್ನು ನೀಡುವವಳು ಎಂಬ ನಂಬಿಕೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net