ನಾರಾಯಣಪ್ಪ ಶಿಳ್ಳೇಕ್ಯಾತಗೆ ರಾಜ್ಯೋತ್ಸವ ಪ್ರಶಸ್ತಿ

30 MANJU 07
Published on

ಹೊಸಪೇಟೆ : ನಗರದ ಕಾರಿಗನೂರಿನ ನಾರಾಯಣಪ್ಪ ಶಿಳ್ಳೇಕ್ಯಾತ ಅವರಿಗೆ ಬಯಲಾಟ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮೊಳಕಾಲ್ಕೂರು ತಾಲೂಕಿನಲ್ಲಿ ಎಲೆರಾಂಪುರದ ಬಯಲುನಾಟಕ ಶಿಕ್ಷಕ ಹನುಂತಪ್ಪ ಅವರ ಮಗ ನಾರಾಯಣಪ್ಪ ಶಿಳ್ಳೇಕ್ಯಾತ ಇವರು 15 ವರ್ಷಗಳಿರುವಾಗಲೇ ತೊಗಲುಗೊಂಬೆ ಕಲಾವಿದನಾಗಿ ಬೆಳೆದರು. ಚಿಕ್ಕ ವಯ್ಯಸಿನಲ್ಲೇ ಕಾರಿಗನೂರಿನಲ್ಲಿ ಬಂದು ವಾಸವಾ ಇವರು ತನ್ನ ಜೀವನ ವನ್ನು ಈ ಕಲೆಗೆ ಮುಡಿಪಾಗಿಟ್ಟುರು.

ಇವರು ಹಂಪಿ ಉತ್ಸವ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಲೆಯನ್ನು ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ತೊಗಲು ಗೊಂಬೆಗಳ ಮೂಲಕ ಏಡ್ಸ್ ಜನಜಾಗೃತಿ, ಮಲೇರಿಯಾ, ಆನೆಕಾಲಿನರೋಗ ಸೇರಿದಂತೆ ಸರ್ಕಾರಿ ಇಲಾಖೆ ಹಾಗೂ ಸಂಘ ಸಂಸ್ಥೆಗಳಿAದ ರಾಜ್ಯಧ್ಯಾಂತ ಹಲವು ಜನಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ. ಇವರಿಗೆ ಹೈದ್ರಾಬಾದ್ ಕರ್ನಾಟಕ ನಾಗರಿಕ ವೇದಿಕೆ ಕೃಷ್ಣದೇವರಾಯ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಮಟ್ಟದ ಕನ್ನಡ ಸಾಂಸ್ಕೃತ ಪ್ರಶಸ್ತಿಗಳು ಸೇರಿದಂತೆ ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

ನಮ್ಮ ಕಲೆಯ ಸೇವೆಯನ್ನು ನೋಡಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಇದರಿಂದ ಇನಷ್ಟು ಜವಾವ್ದಾರಿ ಹೆಚ್ಚಿದೆ. ಶ್ರಮಕ್ಕೆ ಪ್ರತಿ ಫಲ ಸಿಕ್ಕೆ ಸಿಗುತ್ತದೆ. - ನಾರಾಯಣಪ್ಪ ಶಿಳ್ಳೇಕ್ಯಾತ, ರಾಜ್ಯೋತ್ಸವ ಪ್ರಶಸ್ತಿ ಪುರಸೃತರು. ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net