ಹೊಸಪೇಟೆ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸಲಾಗುತ್ತದೆ.
ಒಣ ಶೌಚಾಲಯಗಳನ್ನು ಸ್ವಚ್ಫಗೊಳಿಸುವುದು, ಅನೈರ್ಮಲ್ಯ ಶೌಚಾಲಯಗಳಿಂದ ಹೊರಹೋಗಿ ತೆರೆದ ಚರಂಡಿಯಲ್ಲಿ ಸಂಗ್ರಹವಾಗುವ ಮಾನವ ಮಲವನ್ನು ಸ್ವಚ್ಫಗೊಳಿಸುವುದು, ಶೌಚಾಲಯದ ಮಲಗುಂಡಿಗಳನ್ನು ದೈಹಿಕವಾಗಿ ಸ್ವಚ್ಫಗೊಳಿಸುವಂತಹ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಯದಲ್ಲಿ ದೈಹಿಕವಾಗಿ ತೊಡಗಿರುವ ವ್ಯಕ್ತಿಗಳು ಇದ್ದಲ್ಲಿ, ದಾಖಲೆಗಳೊಂದಿಗೆ ಹೆಸರನ್ನು ಆ.15ರೊಳಗೆ ನೋಂದಾಯಿಸ ಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.