ನಾಗಪುರ ದೀಕ್ಷಾ ಭೂಮಿ ಯಾತ್ರೆ

10 MANJU 05
Published on

ಹೊಸಪೇಟೆ: ದಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾ ಭೂಮಿಗೆ ಯಾತ್ರೆ ಹೋಗುವ ಬಸ್‌ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ.ಮಂಜುನಾಥ ನೀಲಿ ನಿಶಾನೆ ತೋರಿಸುವ ಚಾಲನೆ ನೀಡಿದರು.

ನಂತರ ಮಾತನಾಡಿ, ಜಿಲ್ಲೆಯಿಂದ ಪ್ರತಿವರ್ಷ ದೀಕ್ಷ ಭೂಮಿಗೆ ಹೋಗಲು ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ, ಟಿಎಸ್‌ಪಿ ಅನುದಾನದಲ್ಲಿ ದೀಕ್ಷಾಭೂಮಿ ದರ್ಶನಕ್ಕೆ ಹೋಗುವ ಯಥಾರ್ತಿಗಳಿಗೆ ನೆರವು ನೀಡುತ್ತದೆ. ದೀಕ್ಷಾಭೂಮಿಗೆ ನಾಲ್ಕು ದಿವಸ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ. ದೀಕ್ಷಾ ಭೂಮಿಯಲ್ಲಿ ಇದು ವರೆಗೂ ಲಕ್ಷಾಂತರ ಜನರು ದೀಕ್ಷೆ ತೆಗೆದು ಕೊಂಡಿರುವುದಾಗಿ ಹೇಳಲಾಗುತ್ತದೆ. ಇಗಲೂ ಜನರು ಬೌದ್ಧ ದೀಕ್ಷೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಯಾತ್ರಿಕರು ಸುರಕ್ಷಿತವಾಗಿ ಹೋಗಿ ಬರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net