ಕಲಾವಿದೆ ಡಾ.ಕೆ.ನಾಗರತ್ನಮ್ಮಗೆ ಗುಬ್ಬಿವೀರಣ್ಣ ಪ್ರಶಸ್ತಿ

13 MANJU 04
Published on
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ ಈ ನೇ ಸಾಲಿನ ಪ್ರತಿಷ್ಠಿತ ಡಾ.ಗುಬ್ಬಿವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೃತ್ತಿ ರಂಗಭೂಮಿಯಲ್ಲಿ ಡಾ.ಕೆ.ನಾಗರತ್ಮಮ್ಮ ಸಾಧನೆಯನ್ನು ಗುರುತಿಸಿ, ಸಾಹಿತಿ ಕುಂ.ವೀರಭದ್ರಪ್ಪ ಅಧ್ಯಕ್ಷತೆಯ ಸಮಿತಿ, ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬಾಲ್ಯದಲ್ಲಿ ರಂಗಭೂಮಿ ಗೀಳನ್ನು ಬೆಳಸಿಕೊಂಡ, ನಾಗರತ್ನಮ್ಮರವರು ತಂದೆ ಕೆ ಮಾರೆಪ್ಪರ ಸಹಕಾರದೊಂದಿಗೆ ಕಲಾವಿದೆಯಾಗಿಯೇ ಬೆಳೆದರು. ಬಿಡುವಿದ್ದಾಗಲೆಲ್ಲಾ ತಂದೆಯೊಂದಿಗೆ ಬಯಲಾಟದ ಪದಗಳು, ಜಾನಪದ ಮತ್ತು ಭಕ್ತಿ ಗೀತೆಗಳನ್ನು ಕಲಿಯುತ್ತಿದ್ದರು.
ರಂಗಭೂಮಿಗೆ ತಂದವರು ಗೌಳೇರ ಮೈಲಾರಪ್ಪನವರು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳೆಲ್ಲರನ್ನು ಸೇರಿಸಿ ನಾಟಕ ಮಾಡಿಸುತ್ತಿದ್ದರು. ಇದಕ್ಕೆ ನಾಗರತ್ನಮ್ಮರವರ ತಂದೆ ನಾಟಕಕ್ಕೆ ಸೇರಿಸಿದರು, ಆಗಿನಿಂದಲೂ ಅವರು ತಮ್ಮ ನಾಟಕಗಳಿಗೆಲ್ಲಾ ನನಗೆ ಒಂದು ಪಾತ್ರ ಕೊಡುತ್ತಿದ್ದರು. ಶಾಲಾ ದಿನಗಳಲ್ಲಿಯೂ ಕೂಡ ರಜೆ ದಿನಗಳಲ್ಲಿ ಹಳ್ಳಿಗಳಿಗೆ ತೆರಳಿ ನಾಟಕ ಪ್ರದರ್ಶನ ನೀಡುತ್ತಿದ್ದರು.
ರಕ್ತರಾತ್ರಿ, ಕುರುಕ್ಷೇತ್ರ, ಹೇಮರೆಡ್ಡಿ ಮಲ್ಲಮ್ಮ ಅಕ್ಷಯಾಂಬರ, ಉತ್ತರ ಭೂಪ, ಶೀಲಾವತಿ, ಬೆಳ್ಳಕ್ಕಿ ಹಿಂಡು ಬೆದರಾವೋ, ಸೂರ್ಯ ಶಿಕಾರಿ, ಸಂಗ್ಯಾ ಬಾಳ್ಯಾ, ಅವಣ್ಯವ್ಯ, ಹಲವಾರು ಬೀದಿ ನಾಟಕಗಳು, ಸಾಕ್ಷರತಾ ಜಾಥಾ, ಗ್ರಾಮೀಣ ರಂಗ ಭೂಮಿಯಲ್ಲಿ ಸುಮಾರು ಅಂದಾಜು 15 ಸಾವಿರ ನಾಟಕಗಳ ಪ್ರಯೋಗಗಳಲ್ಲಿ ಅಭಿನಯಿಸಿದ್ದಾರೆ. ರಕ್ತರಾತ್ರಿ, ಕುರುಕ್ಷೇತ್ರ, ಹೇಮರೆಡ್ಡಿ ಮಲ್ಲಮ್ಮ ನಾಟಕಗಳು ವರ್ಷಕ್ಕೆ 20-25 ಪ್ರದರ್ಶನ ಕಂಡು ಜನಮನ ಸೊರೆಗೊಂಡಿದ್ದವು.
1994 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,
ಹಂಪೆಯ ಕನ್ನಡ ವಿವಿಯಿಂದ ಮರಿಯಮ್ಮನಹಳ್ಳಿ ರಂಗಸಿರಿ ಎಂಬ ಹೆಸರಿನಲ್ಲಿ ಇವರ ಜೀವನಗಾಥೆಯನ್ನು ಪ್ರಕಟಿಸಿತ್ತು. ಇವರ ವೃತ್ತಿ ಜೀವನದ ಸಾಧನೆಗಾಗಿ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿ ಗೌರವ ಡಾಕ್ಟರೇಟ್ ನೀಡಿದೆ.
ಗುಲ್ಬರ್ಗಾ ವಿವಿ ಇವರ ಜೀವನ ಚರಿತ್ರೆಯನ್ನು ಎಂ.ಎ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ 2018-21 ರವರೆಗೆ ಪಠ್ಯವಾಗಿಸಿತ್ತು. ಅಲ್ಲದೇ ಸರ್ಕಾರವೂ ಇವರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಾಲ್ಮೀಕಿ, ಕಿತ್ತೂರು ರಾಣಿಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಮಾಜಿ ಡಿಸಿಎಂ ದಿ.ಎಂ.ಪಿ.ಪ್ರಕಾಶ್ ರವರು ನಾಗರತ್ನಮ್ಮ ರಾಜಕೀಯಕ್ಕೆ ಕರೆ ತಂದು ಇಲ್ಲಿನ ತಾಲೂಕು ಪಂಚಾಯತಿಯ ಸದಸ್ಯೆಯಾಗಿ, ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.  ನಾಟಕ ಅಕಾಡೆಮಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ 74ರ ಈ ವಯಸ್ಸಿನಲ್ಲಿಯೂ ತಮ್ಮ ರಂಗಚಟುವಟಿಕೆಗಳಿಂದ ವಿಮುಖರಾಗದೆ ಉಳಿದಿದ್ದಾರೆ.
ನನ್ನ ರಂಗಜೀವನಕ್ಕೆ ಬೆಳಕಾದ ಅಪ್ಪ, ಸಂಗೀತ ಮೇಷ್ಟ್ರು ತೋಟಯ್ಯ ಸ್ವಾಮಿ, ಗೌಳೆರ ಮೈಲಾರಪ್ಪ, ಲಲಿತ ಕಲಾರಂಗಕ್ಕೆ ನನ್ನ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ.
ಡಾ.ಕೆ.ನಾಗರತ್ನಮ್ಮ, ಹಿರಿಯ ರಂಗಕಲಾವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net