15 ದಿನದೊಳಗೆ ತನಿಖಾ ವರದಿ ನೀಡಿ

28 MANJU 03
Published on

ಹೊಸಪೇಟೆ: ನಗರದ ಅನಂತಶಯನ ಬಡಾವಣೆಯಲ್ಲಿ‌ ನೀರಿನ ಗುಂಡಿಗೆಗೆ ಮಗುವೊಂದು ಬಿದ್ದು ಮೃತಪಟ್ಟ ಘಟನೆಯು ಎಚ್ಚರಿಕೆ ಗಂಟೆಯಾಗಿದೆ. ಕರುಳು ಹಿಂಡುವಂತಹ ಇಂತಹ ಅವಘಡಗಳು ಮರುಕಳಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನರ‍್ದೇಶಕರಿ ಹಾಗೂ ನಗರಸಭೆಯ ಪೌರಾಯುಕ್ತರೊಂದಿಗೆ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. 15 ದಿನಗಳೊಳಗೆ ತನಿಖಾ ವರದಿ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನರ‍್ದೇಶಕ‌ ಮನೋಹರಗೆ ಸೂಚನೆ ನೀಡಿದರು.

ಕುಟುಂಬದವರಿಗೆ ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ನಗರದ ವಿವಿಧೆಡೆಯಲ್ಲಿ ಈ ರೀತಿ ಇರುವ ರ‍್ಕಾರಿ ಹಾಗೂ ಖಾಸಗಿಯವರ ಖಾಲಿ ನಿವೇಶನಗಳ ಕೂಡಲೇ ಸಮೀಕ್ಷೆ ನಡೆಸಬೇಕು. ಖಾಲಿ ಸೈಟಗಳಲ್ಲಿ ನೀರು ನಿಂತಿರುವುದು ಕಂಡುಬಂದರೆ ಅಂತಹ ನಿವೇಶನಗಳ ಮಾಲೀಕರಿಗೆ ಕೂಡಲೇ ನೊಟೀಸ್ ಜಾರಿ ಮಾಡಬೇಕು. ನೀರು ಖಾಲಿ ಮಾಡಿಸಲು ಗಡುವು ವಿಧಿಸಬೇಕು. ಆದಾಗ್ಯೂ ಖಾಸಗಿ ನಿವೇಶನ ಮಾಲೀಕರು ನೀರನ್ನು ಖಾಲಿ ಮಾಡದಿದ್ದಲ್ಲಿ ನಗರಸಭೆಯಿಂದಲೇ, ಖಾಲಿ ಸೈಟನಲ್ಲಿ ನಿಂತಿರುವ ನೀರನ್ನು ಖಾಲಿ ಮಾಡಿಸಬೇಕು. ಇದಕ್ಕೆ ತಗುಲುವ ರ‍್ಚು ವೆಚ್ಚವನ್ನು ಕಂದಾಯ ವಸೂಲಾತಿ ರೀತಿಯಲ್ಲಿ ಸಂಬಂಧಿಸಿದವರಿಂದಲೇ ಪಡೆದುಕೊಳ್ಳಬೇಕು ಎಂದರು.

ಅಂಗನವಾಡಿ, ಶಾಲೆಗೆ ಭೇಟಿ

ಅನಂತಶಯನ ಬಡಾವಣೆಯಲ್ಲಿನ ಭೇಟಿ ನೀಡಿದ ಜಿಲ್ಲಾಧಿಕಾರಿ ಅಂಗನವಾಡಿ ಪರಿಶೀಲನೆ ನಡೆಸಿದರು. ಅಂಗನವಾಡಿಯಲ್ಲಿ ಸಿದ್ಧಪಡಿಸಿದ್ದ ಆಹಾರವನ್ನು ಸೇವಿಸಿ ಗುಣಮಟ್ಟ ಪರೀಕ್ಷಿಸಿದರು. ಬಳಿಕ ರ‍್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯಲ್ಲಿ ಶೌಚಾಲಯಗಳ ನರ‍್ವಹಣೆ ಸರಿ ಇಲ್ಲ ಎಂದು ಸರ‍್ವಜನಿಕರು ದೂರಿದರು. ಶಾಲೆಯಲ್ಲಿ ಕೂಡಲೇ ಶೌಚಾಲಯಗಳ ನರ‍್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಮುಖ್ಯಶಿಕ್ಷಕನಿಗೆ ನರ‍್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net