

ಹೊಸಪೇಟೆ: ಕಳೆದ ಒಂದು ತಿಂಗಳಿನಿAದ ಉಪವಾಸ ಮಾಡುತ್ತಿದ್ದ ಮುಸ್ಲಿಂ ಬಾಂಧವರು ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಸೇರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದವರು ಭಾನುವಾರ ಸಂಜೆ ಚಂದ್ರ ದರ್ಶನವಾಗುತ್ತಿದ್ದಂತೆ ಸೋಮವಾರ ರಂಜಾನ್ ಆಚರಣೆಗಾಗಿ ನಿರ್ಧಾರ ಕೈಗೊಂಡರು. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು.
ಮಧ್ಯಾಹ್ನ ವಿಶೇಷ ಖಾದ್ಯವಾದ ಸುರಕುರಮಾ ಸವಿದು ಹಬ್ಬ ಆಚರಿಸಿದರು. ಮೌಲ್ವಿಗಳು ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಬಡವರ ಮನೆಗಳಿಗೆ ತೆರಳಿದ ಜನರು ಬಟ್ಟೆ, ಹಣ ನೀಡಿ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ನಾನಾ ಧರ್ಮೀಯರಿಗೆ ಶುಭ ಕೋರಿದ ಮುಸ್ಲಿಂ ಸಮುದಾಯದವರು ಅಪ್ಪುಗೆಯ ಮೂಲಕ ಈದ್ ಮುಬಾರಕ್ ಎಂದರು.
ಅAಗಡಿಗಳಲ್ಲಿ ಅತ್ತರ್, ಶ್ಯಾವಿಗೆ, ಬಟ್ಟೆಗಳು, ಗೃಹಾಲಂಕಾರ ವಸ್ತುಗಳ ಮಾರಾಟ ಜೋರಾಗಿತ್ತು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಧ್ಯಾಹ್ನ ಮನೆ ಮನೆಗಳಲ್ಲಿ ಶ್ಯಾವಿಗೆಯ ವಿಶೇಷ ಖಾದ್ಯ ಸಿದ್ಧಪಡಿಸಲಾಯಿತು. ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಔತಣಕೂಟ ಆಯೋಜಿಸಲಾಗಿತ್ತು. ಸಂಜೆ ಇಫ್ತಾರ್ ಕೂಟದ ಮೂಲಕ ವಿಶೇಷ ಖಾದ್ಯಗಳ ಔತಣಕೂಟ ನಡೆಯಿತು.