

ಹೊಸಪೇಟೆ: ಸಂಗೀತ ಸಾಧನೆ ಎನ್ನುವುದು ತಾಸುಗಳ ಲೆಕ್ಕದಲ್ಲಿ ನಡೆಯುವಂಥದ್ದಲ್ಲ. ಹಾಗೆ ಲೆಕ್ಕಾಚಾರವಿದ್ದರೆ ಈ ಕ್ಷೇತ್ರದತ್ತ ಬರಲೇಬಾರದು ಎಂದು ಧಾರವಾಡದ ತಬಲಾ ಕಲಾವಿದ ಮಣಿಕಂಠ ಸುನಗಾರ ಹೇಳಿದರು.
ಕನ್ನಡ ವಿವಿ ಸಂಗೀತ ಮತ್ತು ನೃತ್ಯ ವಿಭಾಗದಿಂದ ಇತ್ತೀಚೆಗೆ ತಬಲಾ ವಾದನ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಾತನಾಡಿದರು.
ತಬಲಾ ವಾದನ ಕುರಿತು ವಿಶೇಷ ಉಪನ್ಯಾಸ ನೀಡುತ್ತ, ವಿದ್ಯಾರ್ಥಿಗಳಿಗೆ ತಬಲಾ ವಾದನ ಕೌಶಲ್ಯ ಬೆಳೆಸಿಕೊಳ್ಳುವ ಕುರಿತು ಅರಿವು ನೀಡಿದರು. ತ್ರಿತಾಲದಿಂದ ಆರಂಭಿಸಿ ವುಟಾನ್, ಕಾಯ್ದಾ, ತುಕುಡಾ ಮುಕುಡಾಗಳಲ್ಲದೆ, ದಿಲ್ಲಿ ಘರಾಣಾ ಕಾಯ್ದಾ, ಬನಾರಸ ಘರಾಣಾ ಕಾಯ್ದಾ, ಲಕ್ನೋ ಘರಾಣಾ ಕಾಯ್ದಾ ಜತೆಗೆ ತಾವೇ ಕಂಪೋಸ್ ಮಾಡಿದ ಕಥಕ್ ಥಾಟ್‌ಗಳನ್ನು ಒಂದು ಗಂಟೆ ಕಾಲ ನುಡಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕ ಡಾ.ತಿಮ್ಮಣ್ಣ ಭೀಮರಾಯ ಹರ‍್ಮೋನಿಯಂ ಸಾಥ್ ನೀಡಿದರು.