

ಹೊಸಪೇಟೆ: ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ದೃಶ್ಯಕಲಾ ವಿಭಾಗದಿಂದ ತಾಲೂಕಿನ ಕಮಲಾಪುರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಿಂದೂಸ್ತಾನಿ ಸಂಗೀತ, ಚಿತ್ರಕಲೆ, ಶಿಲ್ಪಕಲಾ ತರಗತಿ ಪ್ರವೇಶಕ್ಕಾಗಿ ಜಾಗೃತ ಅಭಿಯಾನ ಕಾರ್ಯಕ್ರಮ ಸೋಮವಾರ ನಡೆಯಿತು.
ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಉದ್ಘಾಟಿಸಿ ಮಾತನಾಡಿ, ಡಾ. ಡಿ.ವಿ.ಪರಮಶಿವಮೂರ್ತಿ ಅವರು ಮಾತನಾಡಿ, ವೃತ್ತಿಗಳಲ್ಲಿ ಅಧ್ಯಾಪಕರ ವೃತ್ತಿಯೇ ಶ್ರೇಷ್ಠವಾದುದು. ಜತೆಗೆ ಕಲೆ ಎನ್ನುವುದು ಮನುಷ್ಯರಲ್ಲಿ ಮನುಷ್ಯತ್ತ÷್ವವನ್ನು ವೃದ್ಧಿಸುತ್ತದೆ ಎಂದರು.
ಸAಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಸಂಗೀತವೂ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಭಾವನೆಯನ್ನು ಬೆಳೆಸುತ್ತದೆ ಎಂದರು.
ಚಿತ್ತವಾಡ್ಗಿ ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ ಮಾತನಾಡಿ, ಕನ್ನಡ ವಿವಿ ಹಳೆಯ ಬೇರಿನೊಂದಿಗೆ ಹೊಸ ಚಿಗುರು ಎನ್ನುವಂತೆ ಹೊಸ ಚಿಂತನೆಗಳನ್ನು ನಾಡಿಗೆ ಬಿತ್ತರಿಸುತ್ತದೆ. ಜತೆಗೆ ಕಲಿಯುಗದ ಹಂಪಿಯ ಪ್ರತಿನಿಧಿಯಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಲ್.ಬಿ.ಕೃಷ್ಣನಾಯ್ಕ, ಹಳೆಯ ವಿದ್ಯಾರ್ಥಿ ಶ್ರೀನಿವಾಸ, ಉಪನ್ಯಾಸಕರಾದ ನಿಸಾರ ಅಹ್ಮದ್, ಪ್ರಭು, ನಾಗಭೂಷಣ ಇತರರಿದ್ದರು.