

ಹೊಸಪೇಟೆ: ಕೊಪ್ಪಳದ ಗವಿಸಿದ್ದಪ್ಪ ನಾಯಕ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಹಿಂದುಪರ ಸಂಘಟನೆಗಳಿAದ ಅಭಯ ಆಂಜನೇಯ ದೇಗುಲದ ಬಳಿ ಶನಿವಾರ ಪ್ರತಿಭಟನೆ ನಡೆಯಿತು.
ಕೊಪ್ಪಳದ ಯುವಕ ಗವಿಸಿದ್ದಪ್ಪ ನಾಯಕ ಕೊಲೆಯ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವವರೆಗೂ ಹೋರಾಟ ನಡೆಸಲಾಗುತ್ತದೆ. ಒಂದು ಕೋಮಿನ ಯುವಕರು ಹಿಂದೂ ಯುವಕನನ್ನು ಕೊಲೆ ಮಾಡುತ್ತಿದ್ದರೇ ಸರ್ಕಾರ ಏನು ಮಾಧಿಡುತ್ತಿದೆ ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಹಿಂದು-ಮುಸ್ಲಿA ಎಂಬ ಬೇಧ ಭಾವವಿಲ್ಲದಂತೆ ಬದುಕುತ್ತಿದ್ದೇವೆ. ಇಂತಹ ಸಮಯದಲ್ಲಿ ಅನ್ಯಕೋವಿನ ಕೆಲ ಕಿಡಗೇಡಿಗಳು ಅಮಾನವಿಯ ದ್ವೇಷ ಮಾಡುತ್ತಿದ್ದಾರೆ. ಇಂತಹ ಘಟನೆಗಳಯ ಮುಂದು ವರೆಯದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ನರಸಿಂಹ ಮೂರ್ತಿ, ಜಂಬಯ್ಯನಾಯಕ, ಚಂದ್ರಕಾAತ್ ಕಾಮತ್, ಕಟಗಿ ಜಂಬಯ್ಯ, ಮಣಿಕಂಠ ಇತರರಿದ್ದರು.