ಕೊಲೆ ಮಾಡಿದ ಮಾವ ಅಳಿಯನ ಬಂದನ

IMG-20250207-WA0038
Published on

ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿ ಇತ್ತೀಚೆಗೆ ನಿಗುಡವಾಗಿ ಕೊಲೆಯಾಗಿದ್ದ ನಾಗರಾಜ್ (33) ಎಂಬುವರ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳಿಗೆ ಕಿರುಕುಳ ನೀಡುತಿದ್ದ ಎಂದು ಹೆಂಡತಿಯ ತಂದೆ ಹಾಗೂ ಸಹೋದರನಿಂದ ಕೊಲೆಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಾಜ್ ಕೊಲೆಯಾಗಿ ಎರಡು ದಿನದ ನಂತರ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಕಮಲಾಪುರ ಪೊಲೀಸರಿಗೆ ತಲೆ ಬಿಸಿಯಾಗಿತ್ತು. ಡಿವೈಎಸ್ಪಿ ಮಂಜುನಾಥ ತಳವಾರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ನಡೆಸಿದರು. ಕೊಲೆ ಆರೋಪಿಗಳಾದ ಮೃತನ ಹೆಣ್ಣುಕೊಟ್ಟ ಮಾವ ಯಲ್ಲಪ್ಪ (65) ಹಾಗೂ ಅಳಿಯ ಚಿದಾನಂದ (30) ಅವರಿಗೆ ಬಂಧಿಸಲಾಗಿದೆ ಎಂದರು.

ನಾಗರಾಜ್ ಅವರು 19 ವರ್ಷಗಳ ಹಿಂದೆ ಕಮಲಾಪುರದ ಕೊಟ್ರಮ್ಮ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬ ಕಲಹದಿಂದ 14 ವರ್ಷದ ಹಿಂದೆ ದೂರ ಇದ್ದರು. ಆದರೆ, ಪ್ರತಿದಿನ ಮನೆ ಬಳಿ ಹೋಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಕೊಟ್ರಮ್ಮಳ ತಂದೆ ಯಲ್ಲಪ್ಪ ಹಾಗೂ ಸಹೋದರ ಚಿದಾನಂದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಯಾರಿಗೂ ತಿಳಿಯ ಬಾರದು ಎಂದು ಬೆಡ್ ಶೀಟ್ ನಲ್ಲಿ ಸುತ್ತಿ, ಆಟೋದಲ್ಲಿ ಸಾಗಿಸಿ ಪಟ್ಟಣದ ವೀರೇಶ್ ತಾತಾ ಮಠದ ಬಳಿಯ ಐಟಿಐ ಕಾಲೇಜಿನ ಕಟ್ಟಡ ಮೇಲೆ ಹಾಕಿ ಬಂದಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net