ಕಮಲಾಪುರ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ

10 MANJU 01
Published on

ಹೊಸಪೇಟೆ: ಕಮಲಾಪುರ ಪುರಸಭೆ ನೂತನ ಕಚೇರಿ ಆರಂಭವಾವಿಗಿದ್ದು ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಸೇವೆ ಬೀಡಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರ ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ಪುರಸಭೆಯ ನೂತನ ಕಚೇರಿ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರಸಭೆ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರ ಮುತುವರ್ಜಿಯಿಂದ 1.80 ಕೋಟಿ ರೂ. ಅನುದಾನ ಬಂದಿದ್ದು, ಸುಸಜ್ಜಿತವಾದ ಕಟ್ಟಡ‌ ನಿರ್ಮಾಣವಾಗಿದೆ. ಕಮಲಾಪುರ ಆಡಳಿತದಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಎಂದಿಗೂ ಮುಂದಾಲೋಚನೆ ಹೆಚ್ಚು. ಈ ನೂತನ ಕಚೇರಿ ಭವ್ಯವಾದ ಕಟ್ಟಡ ಮುಂದಿನ ಪೀಳಿಗೆಗೆ ಕೊಡುಗೆಯಾಗಿದೆ. ಪಟ್ಟಣದಲ್ಲಿ ಕುಡಿವ ನೀರಿನ ವ್ಯವಸ್ಥೆ, ಒಳಚರಂಡಿ ಸೇರಿದಂತೆ ಇತರೆ ಕಾರ್ಯಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಗಳಿಗೆ 50ರಿಂದ 80 ಕೋಟಿ ರೂ.ವರೆಗೆ ವಿಶೇಷ ಅನುದಾನ‌ ಕೊಡುತ್ತಿದ್ದಾರೆ. ಆದ್ದರಿಂದ ಕಮಲಾಪುರ ಅಭಿವೃದ್ಧಿಗಾಗಿ 15 ಕೋಟಿ ರೂ. ಬಿಡುಗಡೆ ನೀಡಿರುವೆ. ಒಂದು ತಿಂಗಳ ಒಳಗೆ ಅಭಿವೃದ್ಧಿ ಕಾರ್ಯಗಳು ಆರಂಭ ಆಗಲಿದೆ. ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಫುಡ್ ಕೋಟ್‌ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಕೇಂದ್ರ ಪುರಾತತ್ವ ಇಲಾಖೆ ಅನುಮತಿಗೆ‌ ಕಾಯುತ್ತಿದ್ದೇವೆ. ಹಂಪಿ ಇಲ್ಲೇ ಇರುವುದರಿಂದ ಪ್ರವಾಸೊದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪಟ್ಟಣ ಅಭಿವೃದ್ಧಿ ಆಗಲು ಸಾರ್ವಜನಿಕರ ಸಹಕಾರ ಕೂಡ ಅಗತ್ಯ ಎಂದರು.

ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಕೇರಿ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿ, ಇದು ನೆಲ ವಿಜಯನಗರ ಸಾಮ್ರಾಜ್ಯದ ಘನತೆಗಿತ್ತು. ಅಂದಿನ ಅರಸರ ಕಾಲದ ಪಟ್ಟಣದಂತೆ ಕಮಲಾಪುರ ಅಭಿವೃದ್ಧಿ ಆಗಬೇಕು ಎಂದರು.

ಅದಕ್ಕೂ ಮುನ್ನ ಕಮಲಾಪುರ ಕೆರೆಯಿಂದ ಕೃಷ್ಣದೇವರಾಯ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬೈಕ್ ರ್ಯಾಲಿ ನಡೆಯಿತು. ನಂತರ ನೂತನ ಕಚೇರಿಯನ್ನು ಉದ್ಘಾಟನೆ ಸಂಸದ ಈ.ತುಕಾರಾಂ ಉದ್ಘಾಟಿಸಿದರು.

ಸಂಡೂರು ಶಾಸಕಿ ಅನ್ನಪೂರ್ಣ, ಪುರಸಭೆ ಅಧ್ಯಕ್ಷೆ ಅಮೀನಾ, ಎಸ್ಪಿ ಎಸ್.ಜಾಹ್ನವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ, ವಕ್ಫಬೋರ್ಡ್ ಜಿಲ್ಲಾ ಅಧ್ಯಕ್ಷ ದಾದಾಪೀರ್, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ. ಉಪಾಧ್ಯಕ್ಷ ಎಚ್.ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯಕುಮಾರ್, ಸದಸ್ಯರಾದ ಮುಕ್ತಿಯಾರ್ ಪಾಷ, ರಾಜು, ಸಯ್ಯದ್ ಅಮಾನುಲ್ಲಾ, ಜಿ.ಅನ್ವರ್, ಕೆ.ವಿ.ಸರಿತಾ, ಪಿ.ರವಿಕುಮಾರ್, ಪಾರ್ವತಿ, ಪಾಲಯ್ಯ, ಬಿ.ಕಿಶೋರ್‌ಕುಮಾರ, ಗೌಸಿಯಾ ಬೇಗಂ, ಮಮತಾ, ಈಶ್ವರಮ್ಮ, ಬೋರಮ್ಮ, ರಾಮಸ್ವಾಮಿ ಮಾಳಗಿ, ಎಂ.ಲಿಂಗಪ್ಪ, ಎನ್.ಗಂಗಮ್ಮ, ಜ್ಯೋತಿಬಾಯಿ. ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಟಿ.ಚಾಂದ್‌ಭಾಷ, ಜೆ.ಚೆನ್ನಪ್ಪ, ಎಂ.ಜಂಬಯ್ಯ, ಕೆ.ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net