ಹೋಂ ಸ್ಟೇ ಅಕ್ರಮಗಳಿಗೆ ಕಡಿವಾಣ ಹಾಕಿ

26 MANJU 01
Published on

ಹೊಸಪೇಟೆ: ಕಮಲಾಪುರ ಹಂಪಿ ಪರಿಸರದಲ್ಲಿ ಇರುವುದರಿಂದ ಅಕ್ರಮ ಹಾಗೂ ನೊಂದಣಿ ಇಲ್ಲದ ಹೋಂ ಸ್ಟೇ, ಹೊಟೇಲ್, ರೆಸಾರ್ಟ್ಗಳಿಗೆ ಅಡಿವಾಣ ಹಾಕಬೇಕಿದೆ ಎಂದು ಸದಸ್ಯ ಮುಕ್ತಿಯಾರ್ ಪಾಷಾ ಒತ್ತಾಯಿಸಿದರು.

ತಾಲೂಕಿನ ಕಮಲಾಪುರ ಪುರಸಭೆಯಲ್ಲಿ ಬಧವಾರ ಅಧ್ಯಕ್ಷೆ ಅಮಿನ ಬೀ ನಡೆದ 2025-26 ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿದರು.

ಬಜೆಟ್ ಮಂಡನೆ ನಂತರ ಸದಸ್ಯರ ಒಪ್ಪಿಗೆ ಪಡೆಯುವ ವೇಳೆ, ಕಮಲಾಪುರದ ಮಾರ್ಗವಾಗಿ ಹಂಪಿಗೆ ದೇಶ-ವಿದೇಶದ ಪ್ರವಾಸಿಗರು ಬರುತ್ತಾರೆ. ಇತ್ತೀಚಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸೊಲ್ಲಾಪುರ ಗ್ರಾಮದ ಘಟನೆ ಹಂಪಿ ಹೆಸರಿಗೆ ಕಪ್ಪುಮಸೆ ಬೆಳೆದಿದೆ. ಅದು ಕೂಡ ನಮ್ಮ ಹಂಪಿಗೂ ಯಾವುದೇ ಸಂಬAಧ ಇಲ್ಲ. ಇಲ್ಲಿ ಪ್ರವಾಸಿಗರನ್ನು ನಂಬಿಕೊAಡು ಹಲವು ಕುಟುಂಬಗಳು ಬದುಕುತ್ತಿವೆ. ಹೊಸಪೇಟೆ ಹೊರತುಪಡಿಸಿದರೆ ಕಮಲಾಪುರವೇ ಹೋಟೆಲ್, ವಸತಿಗಾಗಿ ಪ್ರವಾಸಿಗರ ಅವಲಂಬಿತರಾಗಿದ್ದಾರೆ. ಅದರಿಂದ ಪ್ರವಾಸಿಗರ ಸುರಕ್ಷತೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪುರಸಭೆ ಸಹಕಾರ ಕೂಡ ಅಗತ್ಯವಾಗಿದೆ. ಆದ್ದರಿಂದ ಅನಧಿಕೃತ ಚಟುವಟಿಕೆಗಿಗೆ ಕಡಿವಾಣ ಹಾಕಬೇಕಿದೆ ಎಂದು ಸದಸ್ಯ ಮುಕ್ತಿಯಾರ್ ಪಾಷಾ ಒತ್ತಾಯಿಸಿದರು.

ಕಳೆದ ಬಾರಿ ಉಳಿತಾಯ ಬಜೆಟ್ ಅನುದಾನ ಯಾವುದೇ ಅಭಿವೃದ್ಧಿ ಆಗದೇ ಸರ್ಕಾರಕ್ಕೆ ಮರಳಿ ಹೋಗಿದೆ. ಇದಕ್ಕೆ ಜವಾಬ್ದಾರಿಯಾರು? ನಿಮ್ಮ ನಿರ್ರಿಕ್ಷö್ಯಕ್ಕೆ ವಾರ್ಡ್ಗಳಲ್ಲಿ ಅಭಿವೃದ್ಧಿ ಆಗದೇ ಚುನಾಯಿಸಿದ ಜನಗಳ ಮುಂದೆ ಕೈಲಾದವಂತೆ ಬದಕುತ್ತಿದ್ದಿವಿ. ಈ ವರೆಗೆ ಪಟ್ಟಣದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಇಲ್ಲ. ಜನರು ನಮ್ಮನ್ನು ಮಿಲನ್ ಗಳಂತೆ ನೀಡುತ್ತಿದ್ದಾರೆ. ನಮ್ಮ ಸದಸ್ವ ಅವದಿ 7 ತಿಂಗಳ ಅವದಿ ಇದೆ. ಆದ್ದರಿಂದ ನಮ್ಮ ಅವದಿಯಲ್ಲಿ ಜನಸಾಮಾನ್ಯರಿಗೂ ಅನುಕೂಲ ಆಗುವಂತೆ ಮೂರು ತಿಂಗಳೊಳಗೆ ಕ್ರಿಯೆ ಯೋಜನ ರೂಪಿಸಬೇಕಿದೆ. ಜನರು ಕಚೇರಿಗೆ ಬಂದು ಎಳೆಯುವ ಮುನ್ನ ವಾರ್ಡ್ಗಳ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಸದಸ್ಯರಾದ ನಿಂಗಪ್ಪ, ಪಾಲಯ್ಯ, ರವಿ ಸೇರಿದಂತೆ ಇತರೆ ಸದಸ್ಯರು ತಾಕೀತ್ತು ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಇನ್ನು ಮುಂದೆ ಸದಸ್ಯರ ಗಮನಕ್ಕೆ ತಂದು ಪ್ರತಿಯೊಂದು ಯೋಜನೆ ರೂಪಿಸಲಾಗುತ್ತದೆ ಎಂದರು.

ಉಪಾಧ್ಯಕ್ಷ ಗೋಪಾಲ ಕೃಷ್ಣ, ಸ್ಥಾಯಿಸಮಿತಿ ಸದಸ್ಯ ಅಜಯ್, ಸದಸ್ಯರಾದ ಗೌಸಿಯಾ, ಜ್ಯೋತಿಬಾಯಿ, ರಾಜು, ಸ್ಥಾನಿಕಾಧಿಕಾರಿಗಳಾದ ಮಲ್ಲಿಕಾರ್ಜುನ, ಮಂಜುನಾಥ, ವಿ.ಎಚ್.ಪತ್ತಾರ್, ಎಸ್.ಎಂ.ಟಿಪ್ಪು, ಎನ್.ಪಿ.ಅರವಿಂದ್ ಇತರರಿದ್ದರು.

ಬಿ ಖಾತೆ ಎಂದರೆನು?

ಪುÀಸಭೆಯಲ್ಲಿ ಯಾವುದೇ ಯೋಜನೆಗಳು ಸದಸ್ಯರಿಗೆ ಗೊತ್ತಿಲ್ಲದೇ ಯೋಜನೆ ರೂಪಿಸುತ್ತಿರಿ. ಅಧಿಕಾರಿಗಳು ನಮ್ಮ ಗಮನಕ್ಕೆ ತರದೆ, ಆಡಳಿತದಲ್ಲಿ ತಮ್ಮದೇ ದರ್ಬಾರ್ ನಡೆದಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಬಿ ಖಾತೆ ಅಭಿಯಾನದ ಬಗ್ಗೆ ಸದಸ್ಯರಿಗೆ ಗೊತ್ತಿಲ್ಲ. ಇನ್ನು ಜನ ಸಾಮಾನ್ಯರಿಗೆ ಹೇಗೆ ಜಾಗೃತಿ ಮೂಡಿಸುತ್ತಿರಿ? ಎಂದು ಸದಸ್ಯರು ಆಗ್ರಹಿಸಿದರು.

ಉಳಿತಾಯ ಬಜೆಟ್

ತಾಲೂಕಿನ ಕಮಲಾಪುರ ಪುರಸಭೆಯಲ್ಲಿ ಬಧವಾರ 2025-26 ನೇ ಸಾಲಿನ 2.79 ಕೋಟಿ ಬಜೆಟ್ ಅನ್ನು ಅಧ್ಯಕ್ಷೆ ಅಮಿನ ಬೀ ಅವರು ಮಂಡಿಸಿದರು. 2.78 ಕೋಟಿ ರೂ. ವಿವಿಧ ಮೂಲಗಳಿಂದ ಅನುದಾನ ನಿರೀಕ್ಷಿಸಲಾಗಿದೆ. 4.11 ಕೋಟಿ ರೂ. ಹಿಂದಿನ ಬಜೆಟ್‌ನಲ್ಲಿನ ಹಣ ಉಳಿದಿತ್ತು. ಈ ಸಲ ಬಜೆಟ್ ಗಾತ್ರ 2.79 ಕೋಟಿ ರೂ. ಇದಾಗಿದೆ. 11.22 ಲಕ್ಷ ರೂ. ಉಳಿತಾಯ ಬಜೆಟ್ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net