ಆಸ್ತಿ ತೆರಿಗೆ ಹೆಚ್ಚಳಕ್ಕೆ ಆಕ್ರೋಶ: ಹೊಸಪೇಟೆಯಲ್ಲಿ ಎಸಿಗೆ ಜನಪರ ವೇದಿಕೆ ಮನವಿ

31052021 Hospet pro-people platform to CMC
Published on

ಹೊಸಪೇಟೆ: ನಗರಸಭೆ ಆಸ್ತಿ ತೆರಿಗೆ ಹೆಚ್ಚಿಸಿದ್ದನ್ನು ಖಂಡಿಸಿ ಜನಪರ ವೇದಿಕೆ ಪದಾಧಿಕಾರಿಗಳು ಸೋಮವಾರ ಎಸಿ ಸಿದ್ದರಾಮೇಶ್ವರಗೆ ಮನವಿ ಸಲ್ಲಿಸಿದರು. ಕರೊನಾ ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ನಗರಸಭೆ ತೆರಿಗೆ ಭಾರ ಹೊರೆಸಿದೆ. ಎಲ್ಲ ರೀತಿಯ ಆಸ್ತಿ ಹಾಗೂ ಖಾಲಿ ನಿವೇಶನ ಮೇಲಿನ ತೆರಿಗೆ ಮೇಲೆ ಶೇ.10 ರಿಂದ ಶೇ.30ಕ್ಕೆ ಹೆಚ್ಚಿಸಿದ್ದು ಖಂಡನೀಯ.

ಆದ್ದರಿಂದ ಕೂಡಲೇ ಹಿಂಪಡೆದು ಹಳೇ ತೆರಿಗೆ ಮುಂದುವರಿಸಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ. ಬಳಿಕ ನಗರಸಭೆ ಪೌರಾಯುಕ್ತ ಮನ್ಸೂರ್‌ಗೆ ಮನವಿ ಸಲ್ಲಿಸಿದರು. ಮುಖಂಡರಾದ ವೈ.ರಾಮಚಂದ್ರಬಾಬು, ಯರಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net