ಗೊಂದಲದ ಗೂಡಾದ ನಗರಸಭೆ ಆಸ್ತಿ

Published on

ಹೊಸಪೇಟೆ: ವಕ್ಸ್ ಬರ‍್ಡ್‌ಗೆ ಸೇರಿದ ಸ್ಥಳ ಎಂದು ನಗರದ ಕೆಂಚಗಾರ ಪೇಟೆಯಲ್ಲಿನ ನಗರಸಭೆ ಅಸ್ತಿಯನ್ನು ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಅವರ ನೇತೃತ್ವದಲ್ಲಿ ನಡೆಸಿದ ರ‍್ವೇ ಕರ‍್ಯಕ್ಕೆ ಸರ‍್ವಜನಿಕರು ಅಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.

ಇಸ್ಲಾಂ ಬೈತುಲ್ಲಾ ಮಾಲ್‌ ಸಂಘಟನೆಗೆ ನಗರಸಭೆ ನೀಡಿದ ಜಾಗ ಎಂದು 30 ರ‍್ಷಗಳಿಂದ ಹಲವು ಬಾರಿ ಬಳಕೆಗೆ ಮುಂದಾಗಿತ್ತು. ಅಂದಿನಿಂದ ಸರ‍್ವಜನಿಕರ ಅಕ್ಷೇಪಣೆಗೆ ಒಳಗಾಗಿದೆ. ಇದೀಗ ವಕ್ಫ ಬೋರ್ಡ್ ಏಕಾಏಕಿ ತಮ್ಮದೆಂದು ರ‍್ವೇಗೆ ಮುಂದಾಗಿದ್ದು, ಸರ‍್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸಪೇಟೆ-ಬಳ್ಳಾರಿ ರಸ್ತೆಯ ಹಳೇ 25ನೇ ವರ‍್ಡ್ ಕೆಂಚಗಾರಪೇಟೆಯ 25-1-12-156ಆಸ್ತಿ ಸಂಖ್ಯೆ ವಕ್ಸ್‌ಬೋಡ್ ೯ಗೆ ಸೇರಿದ್ದು ಎಂದು ಯಾವುದೇ ದಾಖಲೆ ತೋರಿಸದೆ ರ‍್ಕಾರದ ಪ್ರಭಾವದಿಂದ ರ‍್ವೇಗೆ ಮುಂದಾಗಿ ಮತ್ತೊಮ್ಮೆ ಸರ‍್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇದು ನಗರಸಭೆ ಅಸ್ತಿಯಾಗಿದ್ದು, ಈ ವರ‍್ಡ್‌ನಲ್ಲಿ ಹಲವು ಸಮಸ್ಯೆಗಳಿವೆ. ಬಾಡಿಗೆ ಮನೆಗಳಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. 3-4 ತಿಂಗಳಿಗೊಮ್ಮೆ ಮನೆ ಹುಡುಕುವ ಪರಿಸ್ಥಿತಿ ಇದೆ. ಇಲ್ಲಿ ಅಂಗನವಾಡಿ ನರ‍್ಮಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ. ಮಹಿಳೆಯರಿಗೆ ಶೌಚಗೃಹ ಇಲ್ಲ. ಸರ‍್ವಜನಿಕರಿಗೆ ಅನುಕೂಲಕ್ಕಾಗಿ ಜಾಗವನ್ನು ಉಪಯೋಸಬೇಕು ಎಂದು ಅಧಿಕಾರಿಗಳನ್ನು ಸರ‍್ವಜನಿಕರು ತರಾಟೆಗೆ ತಗೆದುಕೊಂಡರು.

ಯಾರದು ಈ ಸಂಪತ್ತು?

ನಗರದ ಕೆಂಚಗಾರಪೇಟೆಯ ಬಳ್ಳಾರಿ ರಸ್ತೆಯಲ್ಲಿ 142 ರ‍್ವೇ ನಂಬರ್ ಈಗಲೂ ನಗರಸಭೆ ಹೆಸರಿನಲ್ಲಿದೆ. ಈ ಸ್ಥಳದಲ್ಲಿದ್ದ ಗ್ರಂಥಾಲಯ ಮತ್ತು ಸರ‍್ವಜನಿಕ ಮಹಿಳಾ ಶೌಚಗೃಹವನ್ನು ತೆರವು ಮಾಡಲಾಗಿದೆ. 1992ರಲ್ಲಿ ನಗರಸಭೆಯಿಂದ ಸಾಮಾಜಿಕ ಚಟುವಟಿಕೆ ನಡೆಸಲು ಇಸ್ಲಾಂ ಬೈತುಲ್ಲಾ ಮಾಲ್ ಎಂಬ ಸಂಸ್ಥೆಯ ಹೆಸರಿನಲ್ಲಿತ್ತು. ಸರ‍್ವಜನಿಕ ಆಸ್ತಿಯನ್ನು ಸಂಘಟನೆಗೆ ನೀಡಿದಕ್ಕೆ 30 ರ‍್ಷಗಳ ಹಿಂದೆ ಸರ‍್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ಸ್ಥಳೀಯ ಆಡಳಿತದ ಜನಪ್ರತಿನಿಧಿಗಳ ಮನೆಗಳಿಗೆ ಸರ‍್ವಜನಿಕರು ನುಗ್ಗಿ ದಾಂಧಲೆ ಮಾಡಿದ್ದರು. ಅಂದಿನಿಂದ ಈ ವರೆಗೆ ನಗರಸಭೆ ಜಾಗವನ್ನು ಉಪ ಯೋಗಿಸದೇ ಖಾಲಿ ಬಿಟ್ಟಿದ್ದಾರೆ. ಇದರ ನಡುವೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ನಗರಸಭೆಯಿಂದ ಫಾರಂ-3 ನೀಡಿದ್ದು, ನೋಂದಣಿಯಾಗಿದೆ ಎನ್ನಲಾಗುತ್ತಿದೆ. ಈಗ ವಕ್ಫ ಬೋರ್ಡ್ ಆಸ್ತಿ ಎಂದು ಅಧಿಕಾರಿಗಳ ತಂಡ ರ‍್ವೇಗೆ ಮುಂದಾಗಿದ್ದು ಗೊಂದಲಕ್ಕೀಡಾಗಿದೆ.

ಸರ್ಕಾರಿ ಜಾಗದ ಸರ್ವೇ ನಡೆಯುತ್ತಿದೆ. ಸಾರ್ವಜನಿಕರ ಆಕ್ಷೇಪಣೆ ಇರುವುದು ನಿಜ. ಅದಕ್ಕೆ ಸೂಕ್ತ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದರೆ ಕ್ರಮಕೈಗೊಳ್ಳಲಾಗುವುದು. - ವಿವೇಕಾನಂದ ಉಪವಿಭಾಗಾಧಿಕಾರಿ, ಹೊಸಪೇಟೆ ನಾನು ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಆಸ್ತಿ ನಮ್ಮದಾಗಿದ್ದರೆ ಅಥವಾ ನಗರಸಭೆ ಆಡಳಿತ ಯಾವುದೇ ನರ‍್ಣಯವನ್ನು ಕೈಗೊಳ್ಳದಿದ್ದರೆ ನಾವು ಆಸ್ತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶಿವಕುಮಾರ, ನಗರಸಭೆ ಪೌರಾಯುಕ್ತ, ಹೊಸಪೇಟೆ

ವಕ್ಫ ಬೋರ್ಡ್ ರ‍್ಕಾರಿ ಸಂಸ್ಥೆಯಾಗಿದ್ದು, ರ‍್ಕಾರದಿಂದ ರ‍್ಕಾರಕ್ಕೆ ಹಸ್ತಾಂತರವಾಗಿದೆ. ಯಾವುದೇ ಖಾಸಗಿ ವ್ಯಕ್ತಿಯಿಂದ ಪರಭಾರೆ ಆಗಿಲ್ಲ. ಇದೀಗ ರ‍್ವೇಗೆ ಮುಂದಾಗಿದ್ದೇವೆ. ಎಸ್.ಕೆ.ದಾದಪೀರ್ ವಕ್ಫ ಬೋರ್ಡ್ ಅಧ್ಯಕ್ಷ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net