ಎರಡನೇ ನಿಮಿಷದಲ್ಲಿ ಮುಗಿದ ಸಾಮಾನ್ಯ ಸಭೆ

09 MANJU 02
Published on

ಹೊಸಪೇಟೆ: ಇಲ್ಲಿನ ನಗರಸಭೆಯಲ್ಲಿ ಬುಧವಾರ ಕರೆಯಲಾಗಿದ್ದ ಸಾಮಾನ್ಯ ಸಭೆ ಆರಂಭವಾಗಿ ಕೇವಲ ಎರಡನೇ ನಿಮಿಷ್ಯದಲ್ಲಿ ಸಭೆ ಮುಕ್ತಯವಾಯಿತು. ನಗರದ ಹಲವು ಸಮಸ್ಯೆಗಳಿದ್ದರೂ, ಯಾವುದೇ ಚೆರ್ಚೆ ನಡೆಯಲಿಲ್ಲ. ಇದು ಪೂರ್ವ ನಿರ್ಧಾರಿತ ಸಭೆಯಂತೆ ನಡೆಯಿತು.

ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷ ರೂಪೇಶ ಕುಮಾರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.05ಕ್ಕೆ ಸಭೆ ಆರಂಭವಾಯಿತು. ಪೌರಾಯುಕ್ತ ಚಂದ್ರಪ್ಪ ಸ್ವಾಗತಿಸುತ್ತಿದ್ದಂತೆ ಸದಸ್ಯ ಹುನುಮಂತ ಸಂಖ್ಯೆ 598 ರಿಂದ 670 ರ ವರೆಗೆ ವಿಷಯ ಮಂಡಿಸಲಾಗಿತ್ತು. ಸಭೆಯಲ್ಲಿ ವಿಷಯ ಸಂಖ್ಯೆ 632 ಮರು ಟೆಂಡರ್ ಕರೆಯಬೇಕು ಹಾಗೂ ವಿಷಯ ಸಂಖ್ಯೆ 665 ಮುಂದಿನ ಸಭೆಗೆ ಮುಂದೂಡಿ ಎಂದು ಹೇಳುತ್ತಿದ್ದಂತೆಯೇ ಬಿಜೆಪಿ ಕೋರಂ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸದಸ್ಯೆ ಮುನ್ನಿಖಾಸಿಂ ಏನೀದು ಸಭೆ ಮುಗಿಯಿತೇ?... ವಂದನಾಪರ್ಣೆಯೇ ಆಗಲಿಲ್ಲಾ ಸಭೆ ಮುಗಿತು ಎನ್ನುವುದಾದರೆ ಹೇಗೆ ಎಂದರು. ಎಲ್ಲಾ ಪ್ರತಿಪಕ್ಷಗಳ ಸದಸ್ಯರು ಬಹುಮತ ಇದೆ ಎಲ್ಲಾ ಮಾತನಾಡಿಯೇ ಸಭೆ ಕರೆದಿದ್ದಾರೆ. ಸಮಸ್ಯೆಗಳ ಚರ್ಚೆ ನಡೆಸಬೇಕಲ್ಲವೇ? ಸೌಜನ್ಯವೇ ಇಲ್ಲಾ ಎಂದು ವಿರೋಧ ಪಕ್ಷದ ಸದಸ್ಯರಯ ಗುಣಗಾಡಿದರು. ಪೌರಾಯುಕ್ತರಾದ ಚಂದ್ರಪ್ಪ ಸದಸ್ಯರ ಸಲಹೆ ಸ್ವೀಕರಿಸಲಾಗಿದೆ ಮುಂದಿನ ದಿನಗಳಲ್ಲಿ ಸಭಾ ನಿಯಮ ಪಾಲಿಸಲಾಗುವುದು ಎಂದು ಸಭೆ ಮುಕ್ತಾಯ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net