

ಹೊಸಪೇಟೆ: ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ನಡೆದರೂ ಕಳಪೆಯಾಗಿವೆ. ಗುತ್ತಿಗೆದಾರರ ಆಮಿಷ್ಯಕ್ಕೆ ಅಧಿಕಾರಿಗಳು ಒಳಗಾಗಿದ್ದಿರಿ ಎಂದು ಇಲ್ಲಿನ ನಗರಸಭೆಯಲ್ಲಿ ಅಧ್ಯಕ್ಷ ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಿಡಬ್ಲೂö್ಯಡಿ ಎಇಇ ರವಿ ನಾಯ್ಕಗೆ ಸದಸ್ಯರು ತರಾಟೆಗೆ ತಗೆದುಕೊಂಡರು.
ನಗರಸಭೆಯಿAದ ಸೌಲಭ್ಯ ಪಡೆದು ರಸ್ತೆಗಳು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಹಲವು ಅಪಘಾತಗಳ ನಡೆಯುತ್ತಿದೆ. ಅಫಘಾತದಲ್ಲಿ ನೋಂದವರಿಗೆ ಪರಿಹಾರ ನೀಡಲಿ. ನಗರದ ಹಲವು ಅವಶ್ಯಕತೆ ಇರುವ ಕಡೆ ಬ್ರೇಕರ್‌ಗಳನ್ನು ಅಳವಡಿಸಿಲ್ಲ. ಇರುವ ಕಡೆ ರಸ್ತೆಗಳಲ್ಲಿ ಕಬ್ಬಿಣದ ಮಳೆ ಎದ್ದಿವೆ. ನಗರಸಭೆ ಅನುಮತಿ ಪಡೆಯದೇ 100 ಬೇಡ್ ಆಸ್ಪತ್ರೆ ರಸ್ತೆ ಅಭಿವೃದ್ಧಿ ಮಾಡಿದ್ದಿರಿ. ಅದು ಕೂಡ ಕಳಪೆಯಾಗಿದೆ. ವಿವಿಧ ಕಡೆ ನಡೆಯುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಶೇ.40ರಷ್ಟು ದಂಧೆ ನಡೆಯುತ್ತಿದೆ. ಈ ರೀತಿಯಲ್ಲಿ ಕಾಮಗಾರಿ ನಡೆದರೆ ಗುಣಮಟ್ಟದ ಕಾಮಗಾರಿ ನಿರೀಕ್ಷೆ ಮಾಡುವಂತ್ತಿಲ್ಲ. ಈ ತಪ್ಪು ಸರಿ ಪಡಿಸದಿದ್ದರೆ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಸದಸ್ಯರಾದ ರಾಘವೇಂದ್ರ, ಗೌಸ್, ಅಬ್ದುಲ್ ಖದೀರ್ ಇತರರು ಒತ್ತಾಯಿಸಿದರು.
ಪಿಡಬ್ಲೂö್ಯಡಿ ಎಇಇ ರವಿ ನಾಯ್ಕ ಮಾತನಾಡಿ, 100 ಬೇಡ್ ಆಸ್ಪತ್ರೆ ರಸ್ತೆಗೆ ರಾಷ್ತ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆದಿದೆ. ನಗರದ ಅವಶ್ಯಕತೆ ಇರುವ ಕಡೆ ಬ್ರೇಕರ್‌ಗಳನ್ನ ಅಳವಡಿಸಲಾಗಿದೆ. ಇನ್ನೂ ದೂರುಗಳು ಬಂದರೆ, ನಿಯಾಮಾನುಸಾರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ ಅವರು, ಕಾಮಗಾರಿಯಲ್ಲಿ ಶೇ.40 ದಂಧೆ ನಡೆಯುತ್ತಿದೆ ಎಂಬ ಆರೋಪ ತಳ್ಳಿಹಾಕಿದರು.
ಇನ್ನೂ ನಗರದಲ್ಲಿ ರಸ್ತೆಗಳು, ವಾರ್ಡ್ಗಳು, ಶೌಚಗೃಹ ಸೇರಿ ಇತರೆ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಎಂಬುದೇ ಮಾಯವಾಗಿದೆ. ಕೆಲಕಡೆ ಶೌಚಗೃಹ, ವಾಣಿಜ್ಯ ಮಳಿಗೆಗಳ ಟೆಂಡರ್ ಮುಗಿದರೂ, ಮರು ಟೆಂಡರ್ ಕರೆಯದೇ ಮೃದುಧೋರಣೆ ಅನುಸರಿಸುತ್ತಿದ್ದಾರೆ. ಪರಿಸರ ಇಂಜಿನಿಯರ್ ಆರತಿ ನಿರ್ಲಕ್ಷö್ಯ ತೋರುತ್ತಾರೆ. ಇದರಲ್ಲಿ ನಮಗೆ ಅನುಮಾವಿದೆ ಎಂದು ಆಗ್ರಹಿಸಿದರು.
ನಗರದ ಲಾಡ್ಜ್ ಗಳಿಗೆ 10 ಸಾವಿರ ರೂ ಇದ್ದ 7 ಸಾವಿರಕ್ಕೆ ಯಾಕೆ ಇಳಿಸಲಾಗಿದೆ. ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರೆ ಕಡೆ ಬರುವ ತೆರಿಗೆ ವಸೂಲಿ ಕಡಿಮಯಾಗಿದೆ. ಆದರೆ, ಅಧಿಕಾರಿಗಳೆ ಇದರಲ್ಲಿ ಸಾತ್ ನೀಡಿದಾಗ ಸರಿಯಾದ ವಸೂಲಿ ಆಗಲ್ಲ. ಇದರಲ್ಲಿ ಅಕ್ರಮ ನಡೆಯುತ್ತಿರುವ ಅನುಮಾನವಿದೆ ಎಂದು ಸದಸ್ಯರು ಆರೋಪಿಸಿದರು. ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ ಇತರರಿದ್ದರು.
ಶಾಸಕ ಎಚ್.ಆರ್.ಗವಿಯಪ್ಪ ಅವರ ಪಿಎ ಎಂದು ನಗರದಲ್ಲಿ ಯಾವುದೇ ಕಾಮಗಾರಿ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳು ಅಡ್ಡಿಯಾಗುತ್ತಿದ್ದಾರೆ. ಶಾಸಕರ ಪಿಎಗಳು ಎಷ್ಟು ಜನರಿದ್ದಾರೆ ಎಂದು ಅಧಿಕೃತ ಪಟ್ಟಿ ಬಿಡುಗಡೆ ಮಾಡಲಿ. ಇಲ್ಲವಾದಲ್ಲ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲ್ಲ ಎಂದು ಸದಸ್ಯ ಗೌಸ್ ನಗರಸಭೆಯಲ್ಲಿ ಅಧಿಕರಿಗಳಿಗೆ ಪ್ರಶ್ನೆ ಮಾಡಿದರು.
ನಗರದಲ್ಲಿ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸಗಳು ಸೇರಿಂತೆ ಹಲವು ಕಾಮಗಾರಿಗಳು ವಿಳಂಬವಾಗುತ್ತಿದೆ. ಗುತ್ತಿಗೆ ಯಾರದೋ, ಕಾಮಗಾರಿ ನಡೆಸುರ‍್ಯಾರೋ? ಎಷ್ಟು ಜನರಿಗೆ ಸಭ್ ಕಾಂಟ್ರಾಕ್ಟರ್ ನೀಡಲಾಗುತ್ತದೆ? ಕಾಮಗಾರಿ ಮೂರರಿಂದ ನಾಲ್ಕು ಜನ ನಡೆಸುತ್ತಿದ್ದಾರೆ. ಸರಿಯಾ ಮಾಹಿತಿ ಇರಲ್ಲ ಎಂದು ಸದಸ್ಯರಾದ ಗೌಸ್, ಜೀವರತ್ನಂ, ಜಂಬಯ್ಯನಾಯಕ, ಲತಾ ಸಂತೋಷ್ ಇತರರು ಆಗ್ರಹಿಸಿದರು. ಇದಕ್ಕೆ ಒತ್ತರಿಸಿದ ಎಇಇ ರವಿನಾಯ್ಕ, ಯಾವುದೇ ಕಾರಣಕ್ಕೂ ಸಬ್ ಕಾಂಟ್ರಕ್ಟರ್ ಇರುವುದಿಲ್ಲ. ವಿಳಂಬ ಮಾಡುತ್ತಿವ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಹೊಸಪೇಟೆಯನ್ನು ನಗರಸಭೆಯಿಂದ ಮಹಾನಗರ ಪಾಲಿಕೆ ಮಾಡಲು ಎಲ್ಲಾ ರೀತಿಯ ಅವಕಾಶಗಳಿವೆ. ಮೂರು ಲಕ್ಷ ಜನ ಸಂಖ್ಯೆಗೆ 5 ರಿಂದ 7 ಸಾವಿರ ಜನ ಸಂಖ್ಯೆ ಕೊರತೆ ಆಗಬಹುದು. ಯಾವುದಾರು ಗ್ರಾಮವನ್ನು ಸೇರಿಕೊಂಡರೆ ಅನುಕೂಲ ಆಗಲಿದೆ. ಇಲ್ಲವೆಂದರೆ ಮುಂದಿನ ವರ್ಷಕ್ಕೆಲ್ಲ 3 ಲಕ್ಷ ಜನ ಸಂಖ್ಯೆ ಆಗಲಿದೆ ಎಂದು ಪೌರಾಯುಕ್ತ ಶಿವಕುಮಾರ್ ಎರಗುಡಿ ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ನಗರದ ಸರ್ವೆ ನಂ.142/1, ವಿಸ್ತೀರ್ಣ 0.26 ಸೆಂಟ್ಸ್ ಜಮೀನು ಆರ್.ಪೆನ್ನಕ್ಕ ಇವರ ಹೆಸರಿನಲ್ಲಿದೆ. ಸರ್ವೆ ನಂ.142ಇ/2ಬಿ ವಿಸ್ತೀರ್ಣ 0.15 ಸೆಂಟ್ಸ್ ಜಮೀನು ಆರ್.ನಾಗಮ್ಮ ಇವರ ಹೆಸರಿನಲ್ಲಿದ್ದ ಜಮೀನಿನ್ನು ನೊಂದಣಿ ಮಾಡಿಸದೇ, ಅಸೆಸ್‌ಮೆಂಟ್ ನಂ.721, ಡೋರ್ ನಂ.721, ಎಂದು ಸೃಷ್ಟಿ ಮಾಡಿದ್ದಾರೆ. ಇಬ್ಬರ ಹೆಸರಿನಲ್ಲಿ ಒಂದೇ ಪಿಐಡಿ ಸಂಖ್ಯೆ ಇದೆ. ಕೆ.ಶಾಂತ ಹಾಗೂ ಬಿ.ಮಂಜುನಾಥ ಇವರ ಹೆಸರಿನದೆ. ಅಧಿಕಾರಿಗಳು ಹಾಕಿ ಫಾರಂ ನಂ.3 ಕೂಡ ನಿಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿದ್ದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಎಚ್.ರಾಘವೇಂದ್ರ ಆಗ್ರಹಿಸಿದರು.