ಮೊಹರಂ ಶಾಂತಿಯುತವಾಗಿ ಆಚರಿಸಿ

22 MANJU 03
Published on

ಹೊಸಪೇಟೆ: ಹಿಂದೂ–ಮುಸ್ಲಿಮ್ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಐ ರಾಜೇಶ್ ಎ.ಬಟಗುರ್ಕಿ ತಿಳಿಸಿದರು.

ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು ಎಂದರು.

ಎಸ್‌ಐ ಸಂತೋಶ್ ಬಿ.ಡಬ್ಬಿನ್ ಮಾತನಾಡಿ, ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ಪೀರಗಳನ್ನು ಕೂಡಿಸುತ್ತಿದ್ದು, ಸಮಿತಿಗಳನ್ನು ರಚಿಸಿಕೊಳ್ಳಬೇಕು. ಸಮಸ್ಯಯಾದರೆ ಸಮಿತಿಯ ಸದಸ್ಯರೇ ನೇರ ಹೊಣೆಯಾಗುತ್ತಾರೆ. ಪೀರಗಳನ್ನು ದಫನ ಮಾಡುವಾಗ ನಿಮ್ಮ ಮಾರ್ಗಗಳನ್ನು ನಮಗೆ ತಿಳಿಸಬೇಕು. ತಂಟೇ ತಕರಾರು ಮಾಡದೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

ಎಸ್‌ಐ ಸಂತೋಶ್ ಬಿ.ಡಬ್ಬಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net