ವಿಜಯನಗರಲದಲ್ಲಿ ಸಂಭ್ರಮದ ಮೊಹರಂ ಆಚರಣೆ

news
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಪೀರಲ ದೇವರಿಗೆ ಹೂವಿನ ಅಲಂಕಾರ ಮಾಡಿರುವುದು.
Published on

ಹೊಸಪೇಟೆ : ಹಿಂದೂ-ಮುಸ್ಲಿA ಬಾಂಧವರ ಭಾವೈಕ್ಯತೆಯನ್ನು ಬಿಂಬಿಸುವ ಮೊಹರಂ ಹಬ್ಬ (ಪೀರಲ ಹಬ್ಬ)ದ ನಿಮಿತ್ತ ಮಂಗಳವಾರ ನಗರ ಸೇರಿದಂತೆ ಜಿಲ್ಲಾಧ್ಯಾಂತ ಜನರು 9ನೇ ದಿನದ ಕತ್ತಲ ರಾತ್ರಿ ಸಂಭ್ರಮದಿAದ ಆಚರಿಸಿದರು.

ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು ಅಷ್ಟೆ ಶ್ರದ್ದಾ ಭಕ್ತಿಯಿಂದ ಆಚರಿಸುವುದು ಇಲ್ಲಿನ ವಾಡಿಕೆಯಾಗಿದೆ. ಪೀರಲ ದೇವರನನು ಪ್ರತಿಷ್ಠಾಪಿಸಿ ಭಕ್ತರು ಹರಿಯನ್ನು ಹೊತ್ತುಕೊಳ್ಳುತ್ತಾರೆ. 10 ದಿನಗಳ ಕಾಲ ಆಚರಣೆಯಾಗುವ ಹಬ್ಬ ಇದಾಗಿದ್ದು, ಹೊಸಪೇಟೆ, ಕಮಲಾಪುರ, ಬುಕ್ಕಸಾಗರ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 9ನೇ ದಿನ ಕತ್ತಲರಾತ್ರಿ ಹಿನ್ನೆಲೆಯಲ್ಲಿ ಪೀರಲ ದೇವರಿಗೆ ಹೂವಿನ ಅಲಂಕಾರಿಸಿ ವಿಶೇಷವಾಗಿ ಹಬ್ಬ ಆಚರಿಸಿದರು.

ಬುಧವಾರ ಬೆಳಗಿನ ಜಾವದ ಸುಮಾರಿಗೆ ದೇವರಿಗೆ ಬಲಿ ಸಮರ್ಪಣೆ ಮತ್ತು ಹರಕೆ ಹೊತ್ತವರಿಂದ ದೇವರ ಎದುರು ಕೆಂಡ ತುಳಿಯುವ ಸೇವೆ ನಡೆಯುತ್ತದೆ. 10 ದಿನಗಳ ಕಾಲ ಹುಲಿ ವೇಶ ಸೇರಿದಂತೆ ನಾನಾ ವೇಶಗಳಲ್ಲಿ ಭಕ್ತರು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net