

ಹೊಸಪೇಟೆ: ಸಾಹಿತಿ ಕುಂ.ವೀರಭದ್ರಪ್ಪ ಕುಬುಸ ಕಥೆ ಆಧಾರಿತ ಕುಬುಸ ಚಿತ್ರ, ರಾಜ್ಯಾದ್ಯಾಂತ ಜು.26 ರಂದು ಬಿಡುಗಡೆಯಾಗಲಿದೆ ಎಂದು ಪದ್ಮಶ್ರೀ ಪುರಸ್ಕೃತೆ ಮಾತೆ ಮಂಜಮ್ಮ ಜೋಗತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಗ್ರಾಮೀಣ ಸೊಗಡು, ಹಾಗೂ ಪ್ರತಿಯೊಬ್ಬರೂ ಕುಳಿತ ನೋಡಲೇಬೇಕಾದ ಕೌಟಂಬಿಕ ಆಧಾರಿತ ಚಿತ್ರ ಇದಾಗಿದೆ. ರಾಜ್ಯ ಒಟ್ಟು 25 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ. ಈ ಚಿತ್ರವನ್ನು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ತೆರಳಿ ನೋಡುವ ಮೂಲಕ ಸಿನಿಮಾವನ್ನು ಗೆಲ್ಲಿಸಿ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದರು.
ವಿ.ಶೋಭ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕತೆ ಸಂಭಾಷಣೆ, ನಿರ್ದೇಶನ ರಘುರಾಮ್ ಚರಣ್,ಹೂವಿನಹಡಗಲಿ ಮುಖ್ಯಭೂಮಿಕೆಯಲ್ಲಿ ನಟರಾಜ್ ಎಸ್.ಭಟ್, ರಶ್ಮಿ ನಟಿಸಿದ್ದಾರೆ. ಸಾಹಿತ್ಯ ಹಾಗೂ ಸಂಗೀತ ಪ್ರದೀಪ್ ಚಂದ್ರ, ಛಾಯಗ್ರಹಣ ಚೇತನ್ ಶರ್ಮ, ಸಂಕಲನ ಅರ್ಜುನ್ ಕಿಟ್ಟು, ಸಹ ನಿರ್ದೇಶನ ಶಿವಮೂರ್ತಿ ದೋಣಿಮೈಲೆ, ಕಾರ್ಯಕಾರಿ ನಿದೇರ್ಶಕರು ಭಾರತಿ ಗುಂಡಿ ರಮೇಶ್ ಸೇರಿದಂತೆ ಸ್ಥಳೀಯರು ಶ್ರಮ ವಹಿಸಿ ಚಿತ್ರ ನಿರ್ಮಿಸಿದ್ದಾರೆ. ನಿರ್ದೇಶಕ ರಘುರಾಮ್ ಚರಣ್, ನಿರ್ದೇಶಕಿ ವಿ.ಶೋಭಾ ಆದಿ ನಾರಾಯಣ, ಹಿರಿಯ ರಂಗಕರ್ಮಿ, ರೈತ ಮುಖಂಡರಾದ ವೀರಸಂಗಯ್ಯ, ಘಂಟಿ ಸೋಮಶೇಖರ, ಸಮಾಜ ಸೇವಕಿ ಕವಿತಾ ಈಶ್ವರ ಸಿಂಗ್, ಗುಂಡಿ ರಮೇಶ್, ದಯಾನಂದ್ ಕಿನ್ನಾಳ್, ಗುಜ್ಜಲ ಗಣೇಶ್, ಪಿ.ವೆಂಕಟೇಶ್, ಹೊನ್ನೂರು ವಲಿ ಇತರರಿದ್ದರು.