ಮುಂಗಾರಿಗೆ ಕೃಷಿ ಇಲಾಖೆ ಭರದ ಸಿದ್ಧತೆ

29 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ರಾಜ್ಯದಲ್ಲಿ ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಕೃಷಿ ಚಟುವಟಿಕೆಗೆ ಸಂಬAಧಿಸಿದAತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವರ್ಷವು ಮುಂಗಾರು ಉತ್ತಮವಾಗಿದ್ದು, ಇಲಾಖೆಯು ರೈತರ ಮೊಗದಲ್ಲಿ ನಗು ಅರಳಿಸಲು ಸೌಲಭ್ಯದ ಜತೆಗೆ ಮಾಹಿತಿಯನ್ನು ನೀಡಲಾಗುತ್ತಿದೆ.

ರಾಜ್ಯವನ್ನು ಮುಂಗಾರು ಪ್ರವೇಶ ಮಾಡಿದೆ. ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ತಜ್ಞರ ವರದಿ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಈ ಸಲ ಮಳೆ ಚೆನ್ನಾಗಿ ಆಗಿ ರೈತರ ಬವಣೆಗೆ ರಿಲೀಫ್ ತರಲಿದೆ ಎಂಬ ಆಶಾಭಾವನೆಯೊಂದಿಗೆ ತಮ್ಮನ್ನು ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಬೇಸಿಗೆಯಲ್ಲಿ ಒಂದೆರಡು ಸಲ ಅಕಾಲಿಕ ಮಳೆ ಬಂದು ಭೂಮಿ ಹದಗೊಳಿಸುವ ಕೆಲಸಕ್ಕೆ ಅನುಕೂಲವಾಗಿದೆ. ರೈತರು ನೇಗಿಲು ಹೊಡೆದ ಹೊಲ ಹರಗಿ, ಕೋಯ್ಲಿ ಮೊದಲಾದ ಕಸ ಆರಿಸಿ ಸ್ವಚ್ಛಗೊಳಿಸಲು ಶುರುವಿಟ್ಟಿರುವುದು ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್ ನೀರಾವರಿ, 2.15 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದೆ. ಒಟ್ಟು 2.78 ಲಕ್ಷ ಹೆಕ್ಟೇರ್ ಕೃಷಿ ಜಮೀನಿದೆ. ಈ ಪೈಕಿ 2.78 ಬಿತ್ತನೆಗೆ ಇಲಾಖೆಯಿಂದ ಗುರಿ ಹೊಂದಲಾಗಿದೆ. ಏಕದಳ ಧಾನ್ಯಗಳು 2.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿಯಾಗಿದ್ದರೆ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ, 31 ಸಾವಿರ ಹೆಕ್ಟೇರ್ ಎಣ್ಣೆ ಕಾಳುಗಳು ಬಿತ್ತನೆ ಗುರಿ ಹೊಂದಲಾಗಿದೆ. ತಿಂಗಳಾAತ್ಯದಲ್ಲಿ 18 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಕೃಷಿ ಯಂತ್ರ ಧಾರೆ ಯೋಜನೆಯೆಲ್ಲಿ ನಾಲ್ಕು ಸಮಸ್ಯೆಗಳಿಂದ ಜಿಲ್ಲೆಯ 18 ಕಡೆ ಯಂತ್ರೋಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈ ಪೈಕಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿAದ ಕಮಲಾಪುರ, ಗುಡೆಕೋಟೆ, ಹಂಪಸಾಗರ, ಹಿರೇಹಡಗಲಿ, ಹರಪನಹಳ್ಳಿ ಈ ಹೋಬಳಿಗಳಲ್ಲಿ ಮಾತ್ರ ಕಾರ್ಯಪವೃತ್ತವಾಗಿವೆ.

ಸಕಾಲಕ್ಕೆ ಬಿತ್ತನೆ ಹಾಗೂ ನಿರ್ವಹಣೆಯ ಮಾಡುವುದನ್ನು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹಿಸಲು ಮತ್ತು ರಸಗೊಬ್ಬರ ಶೇಖರಿಸಲು ಮುಂದಾಗಿದೆ.

ಕಳೆದೆರಡು ದಿನಗಳಿಂದ ಹವಾಮಾನ­ದಲ್ಲಿ ಕೊಂಚ ಬದ­ಲಾವಣೆ ಕಂಡು ಬಂದಿದ್ದು, ಮುಂಗಾರು ಸಕಾಲಕ್ಕೆ ಬಿತ್ತನೆ ಮುನ್ಸೂಚನೆ ದೊರೆತಿದೆ. ರೈತರು ನಿರಾಸೆಗೊಳ್ಳದೇ ಕೃಷಿ ಚಟುವಟಿಕೆ­ಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರನ್ನು ಹುರಿದುಂಬಿಸುತ್ತಿದ್ದಾರೆ.

ಮಳೆ ಪ್ರಮಾಣ

ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ ಅಂತ್ಯಕ್ಕೆ ವಾಡಿಕೆ ಮಳೆ 80.8 ಮೀ.ಮೀ ಆಗಬೇಕಾಗಿತ್ತು, 164.9 ಸೆಂ.ಮೀ ಮಳೆಯಾಗಿದೆ. ಮೇ ತಿಂಗಳ ವಾಡಿಕೆ ಮಳೆ 49.5 ಮೀ.ಮೀ ಮಳೆಗೆ ಇಲ್ಲಿಯ ವರೆಗೆ 105.5 ಮೀ.ಮೀ ಮಳೆಯಾಗಿದೆ. ಈ ವಾರ ಸುರಿದ ಮಳೆಯಿಂದ ಈ ತಿಂಗಳ ವಾಡಿಕೆಗಿಂತ 113 ಮಿಮೀ ಮಳೆ ಹೆಚ್ಚಾಗಿದೆ.

ಬೀಜ, ಗೊಬ್ಬರ ಕೊರತೆಯಿಲ್ಲ

ವಿಜಯನಗರ ಜಿಲ್ಲೆಯಲ್ಲಿ ಬಿತ್ತನೆ ಗುರಿ ಹೊಂದಿರುವ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಬೇಡಿಕೆಯಂತೆ ಬೀಜಗಳನ್ನು ತರಿಸಿ ದಾಸ್ತಾನು ಮಾಡುವ ಕೆಲಸವನ್ನು ಕೃಷಿ ಇಲಾಖೆ ಆರಂಭಿಸಿದೆ. ಯಾವುದೆ ಕೊರೆತೆಯಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ ಸೇರಿದಂತೆ 18.71 ಕ್ವಿಂಟಾಲ್ ಬಿತ್ತನೆ ಬೀಜ ಮತ್ತು ಸೆಪ್ಟಂಬರ್‌ವರೆಗೆ 1.11 ಮೆಟ್ರಿಕ್ ಟನ್ ರಸಗೊಬ್ಬರ ಬೇಕಾಗುತ್ತದೆ. ಅದರಲ್ಲಿ ಈ ಪೈಕಿ 11 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಬಂದಿದೆ. ಇನ್ನೂಳಿದಿದ್ದನ್ನು ರೈತರು ಸಂಗ್ರಹಿಸಿಕೊAಡಿರುತ್ತಾರೆ. ಅಲ್ಲದೆ ಖಾಸಗಿ ಆಗ್ರೋಗಳಲ್ಲಿ ಸಾವಿರಾರು ಕ್ವಿಂಟಾಲ್ ಬೀಜಗಳು ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಬೀಜಗಳು ಲಭವಿದ್ದು ರೈತರ ಸ್ವರೂಪ ಯೋಗ ಪಡೆದುಕೊಳ್ಳಬೇಕು. ಸಲಹೆ ಸೂಚನೆಗೆ ಕೃಷಿ ಇಲಾಖೆ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕು. - ಶರಣಪ್ಪ ಮುದುಗಲ್, ಕೃಷಿ ಜೆಡಿ, ವಿಜಯನಗರ

ತೋಟಗಾರಿಕೆ ಇಲಾಖೆಯಿಂದ ಮುಂಗಾರಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮುಂಗಾರಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. - ಚಿದಾನಂದ ಪೂಜಾರ್, ಡಿಡಿ ತೋಟಗಾರಿಕೆ ಇಲಾಖೆ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net