ಕೋತಿ ದಾಳಿಗೆ ಬಾಲಕಿ ಸಾವು

Published on

ಹೊಸಪೇಟೆ: ಕೋತಿ ದಾಳಿಯಿಂದ ಮೂರುವರೆ ರ‍್ಷದ ಅನನ್ಯ ಎಂಬ ಬಾಲಕಿ ಮೃತಪಟ್ಟ ಘಟನೆ ನಗರದ ಚಲುವಾದಿ ಕೇರಿಯಲ್ಲಿ ಇತ್ತೀಚಿಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮುನಿಯಪ್ಪ ಎಂಬುವರ ಮಗಳು ಅನನ್ಯ (3.6) ಕಳೆದ ಜೂ.28ರಂದು ಮೊಸರು ತರಲೆಂದು ಅಂಗಡಿಗೆ ಹೋಗುವ ವೇಳೆ ಕೋತಿ ದಾಳಿ ಮಾಡಿದೆ. ಇದರಿಂದ ಅಂದು ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎರಡು ಮೂರು ಚಿಕಿತ್ಸೆ‌ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಜು.02ರಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಯ ವರೆಗೆ ಮಾತನಾಡುತ್ತಿದ್ದ ಬಾಲಕಿ ಕೋಮಾಕ್ಕೆ ಹೋದಳು. ಚಿಕಿತ್ಸೆ ಫಲಕಾರಿ ಆಗದೆ ಜು.07ರಂದು ಮೃತಪಟ್ಟಿದ್ದಾಳೆ. ಈ ಹಿಂದೆ ಇದೆ ಕೋತಿ ಹಲವರ ಮೇಲೆ ದಾಳಿ ಮಾಡಿದೆ ಎಂದು ಬಾಲಕಿ ತಂದೆ ಮುನಿಯಪ್ಪ ಆರೋಪಿಸಿದರು.

ನಗರದ ಚಲುವಾದಿಕೆರಿಯಲ್ಲಿ ದಾಳಿನ ಮಾಡುತ್ತಿದ್ದ ಕೋತಿಯ ಸೆರೆಯಾಗಿದೆ. ಅದರೆ, ಬಾಲಕಿ ಕೋತಿ ದಾಳಿಗೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ. - ಎಚ್‌.ಅನುಪಮ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net