ಮನಿ ಡಬ್ಲಿಂಗ್ ಕೋಟಿಗೂ ಅಧಿಕ ವಂಚನೆ

0
Published on

ಹೊಸಪೇಟೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡೋದಾಗಿ ನಂಬಿಸಿ 1.59 ಕೋಟಿ ರೂ. ವಂಚನೆ ಮಾಡಿ ಪರಾರಿಯಾಗಿರೋಘಟನೆ ನಗರದಲ್ಲಿ ಬೆಳಕಿಗೆ ಬಂದಿದು, ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಒಂದು ಕಡೆಯಾದರೆ, ನಗರದಲ್ಲಿ ಮನಿ ಡಬ್ಲಿಂಗ್ ಹೆಸರಿನಲ್ಲಿ ಕೋಟಿ, ಕೋಟಿ ವಂಚನೆ ಮಾಡಿ ಪರಾರಿಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಬಡವರಿಂದ ಹಣ ದುಪ್ಪಟ್ಟು ಹೆಸರಿನಲ್ಲಿ ಹಣ ಪಡೆದ ಅರೋಪಡಿ ನಗರದ ನಿವಾಸಿ ಮುಮ್ತಾಜ್ ಬೇಗಂ ಸೇರಿ 8 ಜನರ ವಿರುದ್ಧ ಎಂ.ಅನೀಷ್ ಎಂಬುವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಿದ್ದಾರೆ. ಅರೋಪಿ ಮುಮ್ತಾಜ್ ಬೇಗಂ ಪರಾರಿಯಾಗಿದ್ದಾಳೆ.

ಖತರ್ನಾಕ್ ಮಹಿಳೆಯು ತನ್ನ ಸಹೋದರ ಕೆರಳ, ಬೆಂಗಳೂರು ಸೇರಿ ಇತರೆಕಡೆ ಷೇರು ಮಾರುಕಟ್ಟೆ, ಗೋಲ್ಡ್, ಪೆಟ್ರೋಲ್ ಬಂಕ್, ಟೂರ್ಸ್ ಆಂಡ್ ಟ್ರಾವೆಲ್ಸ್, ಪೈಪ್ ಪ್ಯಾಕ್ಟರಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ಮಾಡಿಕೊಡ್ತೀವಿ ಎಂಬ ಮರಳು ಮಾತು ನಂಬಿ ನೂರಾರು ಜನರು ಪಂಗನಾಮ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಒಬ್ಬೊಬ್ಬರಿಂದ 2 ಲಕ್ಷ ರೂಪಾಯಿಂದ 30 ಲಕ್ಷಕ್ಕೂ ರೂ.ಗೂ ಅಧಿಕ ಹಣ ಕಟ್ಟಿಸಿಕೊಂಡಿದ್ದಾರೆ. ಹಣ ಕೇಳಲು ಹೋದವರ ಮೇಲೆ ದಬ್ಬಾಳಿಕೆ ನಡೆಸಿ ವಾಪಸ್ ಕಳಿಸ್ತುತ್ತಿದ್ದಾರೆ. ಇವರ ವಿರುದ್ಧ ಅನೀಸ್ ಎಂಬುವರಿಗೆ ಒಂದು ಕೋಟಿ ರೂ.ಗೂ ಅಧಿಕ ಹಣ ವಂಚನೆಯಾಗಿದೆ ಎಂದು ಇಲ್ಲಿನ ಪಟ್ಟಣ ಠಾಣೆಯಲ್ಲಿ ಮಮ್ತಾಜ್ ಬೇಗಂ ಮತ್ತು ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಮ್ತಾಜ್ ಬೇಗಂ ಸೇರಿ 6 ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ನಗರದ ನಿವಾಸಿ ಮಮ್ತಾಜ್ ಬೇಗಂ ಸೇರಿ 8 ಜನರು 1.59 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಒಬ್ಬರು ದೂರು ದಾಖಲಿಸಿದ್ದಾರೆ. ಕೆರಳದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ. - ಬಿ.ಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net