

ಹೊಸಪೇಟೆ: ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಡಾ.ಮೊಗಳ್ಳಿ ಗಣೇಶ ಅವರ ಸಂತಾಪ ಸೂಚಕ ಸಭೆ ಸೋಮವಾರ ನಡೆಯಿತು.
ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಡಾ.ಮೊಗಳ್ಳಿ ಗಣೇಶ ಅವರು ಬಡಕುಟುಂಬದಿAದ ಬಂದು ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದವರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ವಸ್ತುನಿಷ್ಠ ಚಿಂತನೆ, ರಾಷ್ಟç ಮತ್ತು ಅಂತರಾಷ್ಟಿçÃಯ ಚಿಂತನೆಗಳನ್ನು ಮೈಗೂಡಿಸಿಕೊಂಡವರು. ನೇರ, ಸ್ಪಷ್ಟ ನಿಲುವುಗಳ ಮೂಲಕ ಸಮಾಜದ ಒಳತಿಗಾಗಿ ಸದಾ ಶ್ರಮಿಸಿದವರಲ್ಲಿ ಮೊಗಳ್ಳಿ ಗಣೇಶ ಅವರು ಒಬ್ಬರು. ಚೆನ್ನಪಟ್ಟಣದ ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿದ ಅವರು, ಆ ಮಣ್ಣಿನ ಸೊಗಡಿನ ಅನುಭವಗಳನ್ನು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಕಥೆ, ಲೇಖನಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಡಾ.ಮೊಗಳ್ಳಿ ಗಣೇಶ ಅವರ ಆಂತರಿಕ ಬದುಕು ಮತ್ತು ಬಾಹ್ಯ ಬದುಕು ಬಹಳ ವಿಭಿನ್ನವಾಗಿತ್ತು. ಡಾ.ಮೊಗಳ್ಳಿ ಗಣೇಶ ಅವರ ಬುಗರಿ, ಮಣ್ಣು, ಕನ್ಯೆ, ಮಳೆ, ದೇವರದಾರಿ ಮುಂತಾದ ಹಲವು ಕೃತಿಗಳು ಯುವಬರಹಗಾರರಿಗೆ ಸ್ಫೂರ್ತಿದಾಯಕವಾಗಿವೆ. ಬುಗರಿ ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಇವರು ಬರವಣಿಗೆ ಮೂಲಕ ಸಾಹಿತ್ಯವಲಯದಲ್ಲಿ ಗುರುತಿಸಿ ಕೊಂಡವರು ಎಂದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಅವರು ಮಾತನಾಡಿ, ಸಾಹಿತ್ಯ ಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಮೊಗಳ್ಳಿ ಗಣೇಶ ಅವರಂತಹ ಶ್ರೇಷ್ಠ ಚಿಂತಕ, ವಿಮರ್ಶಕರು ಸಿಗುವುದು ಬಹಳ ವಿರಳ. ಅವರು ತುಂಬಾ ನಿಷ್ಠೂರವಾದಿಗಳು. ಅವರು ತಮ್ಮ ಜೀವನದಲ್ಲಿ ಕಂಡ ಅನುಭವಗಳು, ಸತ್ಯ ಘಟನೆಗಳನ್ನು ಬರವಣಿಗೆ ಮೂಲಕ ಬಹುದೊಡ್ಡ ಓದುಗ ವರ್ಗವನ್ನು ಸೃಷ್ಠಿಸಿದ್ದರು. ಜನಪದ, ಸಾಹಿತ್ಯ, ಚರಿತ್ರೆ ವಿಷಯಗಳಲ್ಲೂ ಅಪಾರ ಜ್ಞಾನವನ್ನು ಹೊಂದಿದ್ದರು. ಕನ್ನಡ ವಿವಿಯ ಅಭಿವೃದ್ಧಿಯಲ್ಲಿ ಸದಾ ನಿರತರಾಗಿದ್ದರು. ವಿವಿಯ ಜತೆಗೆ ಮೊಗಳ್ಳಿ ಅವರು ಹೆಸರು ಸದಾ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ ಎಂದರು.