ಅಗತ್ಯತೆ ಕ್ರಿಯಾಯೋಜನೆ ರೂಪಿಸಿ

Published on
ಹೊಸಪೇಟೆ: ತಾಲೂಕಿನಲ್ಲಿ ಕುಡಿವ ನೀರಿ ಸೇರಿದಂತೆ ಮೂಲಸೌಕರ್ಯದ ಕೊರತೆ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರವನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಾರ್ಡ್ ಮತ್ತು ಹಳ್ಳಿಗಳಲ್ಲಿ ಯಾವುದೇ ತೊಂದರೆ ಬರದಂತೆ ಕ್ರಮ ಕೈಗೊಳ್ಕ ಬೇಕು. ಅಗತ್ಯತೆ ಬೇಕಾದಲ್ಲಿ  ಕ್ರಿಯಾಯೋಜನೆ ತಯಾರಿಸಿ ನೀಡಿದರೆ, ಅನುದಾನದ ಬಿಡುಗಡೆ ಮಾಡಿಸುವೆ. ಅತಿ ಅವಶ್ಯಕ ಕಾಮಗಾರಿಗಳ ಅನುದಾನಕ್ಕಾಗಿ ಮುಂಬರುವ ಬಜೆಟ್ ನಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷ ಕೊನೆಯ ಹಂತದಲ್ಲಿ ಇರುವುದರಿಂದ ರಾಜ್ಯದಿಂದ ಬಂದ ಯಾವುದೇ ಅನುದಾನವು ಕೈ ತಪ್ಪದಂತೆ ನೋಡಿಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಉಚಿತ ತರಕಾರಿ ಬೀಜಗಳು ಮತ್ತು ರಸಗೊಬ್ಬರ ವಿತರಿಸಲಾಯಿತು.
ಮತ್ತು ತಾಲೂಕ ಪಂಚಾಯತಿ ವತಿಯಿಂದ ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಸಮವಸ್ತ್ರ ಮತ್ತು ಗುರುತಿನ ಚೀಟಿ ವಿತರಿಸಲಾಯಿತು.
ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್  ಶೃತಿ ಮಳ್ಳಪ್ಪ ಗೌಡ್ರು, ತಾ.ಪಂ. ಇಒ ಲಕ್ಷ್ಮಿಕಾಂತ್, ತಾಲೂಕ ಪಂಚಾಯಿತಿ ಆಡಳಿತ ಅಧಿಕಾರಿ ಸುಧೀರ್, ನಾಮ ನಿರ್ದೇಶಕರಾದ ಸದಸ್ಯ ದಿವಾಕರ, ಇ.ಚಂದ್ರಶೇಖರ, ಜಾನಕಿ ರಾಮ್, ಪಿಸಿಎಆರ್ ಡಿ  ಬ್ಯಾಂಕ್ ಅಧ್ಯಕ್ಷ ಅಮ್ಮಾಜಿ ಹೇಮಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net