

ಹೊಸಪೇಟೆ: ನಾವು ಒಂದು ಸಿದ್ದಾಂತದ ಮೇಲೆ ಆಯ್ಕೆಯಾಗಿ ಬಂದವರು. ನಾವು ಜಗಳ ಆಡುತ್ತಿವಿ, ಆ ಮೇಲೆ ಒಂದಾಗ್ತಿವಿ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕರನ್ನು ಸೇಳೆಯಲು ಕೋಟಿ, ಕೋಟಿ ಆಫರ್ ವಿಚಾರದಲ್ಲಿ ನನ್ನನ್ನೂ ಸೇರಿಸಿಕೊಂಡಂತೆ ನಮ್ಮ ಯಾವ ಶಾಸಕರನ್ನು ಕೊಂಡುಕೊಳ್ಳಲು ಆಗೋಲ್ಲಾ. ನಾನು ಈ ವಿಚಾರ ಕೇಳಿತ್ತಿರೋದು ಮೊದಲ ಸಲ. ನನಗಂತೂ ಯಾವ ಈ ಥರದ ಸುದ್ದಿ ಬಂದಿಲ್ಲಾ. 135 ಜನ ಶಾಸಕರಿರೋ ದೊಡ್ಡ ಪಕ್ಷವನ್ನು ಅಸ್ಥಿರಗೊಳಿಸೋಕೆ ಅಸಾಧ್ಯ. ಜನ ಶಾಸಕರನ್ನು ಆರಿಸಬೇಕಾದರೆ ಕ್ಯಾರೆಕ್ಟರ್ ಇಲ್ಲದವರನ್ನು ಆರಿಸೋಲ್ಲಾ. ಕ್ಯಾರೆಕ್ಟರ್ ಇರೋರನ್ನೇ ಆರಿಸ್ತಾರೆ, ಕಾಂಗ್ರೆಸ್ ಶಾಸಕರಲ್ಲಿ ನನಕ್ಕಿಂತ ಒಳ್ಳೆಯವರಿದ್ದಾರೆ ಎಂದರು.