

ಹೊಸಪೇಟೆ: ತಾಲೂಕಿನ ರ‍್ಮಸಾಗರ ಗ್ರಾಮದಲ್ಲಿ ಬುಧವಾರ ಶಾಸಕ ಎಚ್.ಆರ್. ಗವಿಯಪ್ಪ ಜನಸಂರ‍್ಕ ಸಭೆ ನಡೆಸಿದರು.
ನಂತರ ಮಾತನಾಡಿ, ಜನರ ಸಮಸ್ಯೆಗೆ ಸದಾ ಸ್ಪಂದಿಸುವೆ. ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಗ್ರಾಮಗಳಿಗೆ ತೆರಳಿ ಜನಸಂರ‍್ಕ ಸಭೆ ನಡೆಸುತ್ತಿರುವೆ. ಮನೆ ಬಾಗಿಲಿಗೆ ಆಡಳಿತವನ್ನು ತರುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಅದಕ್ಕೂ ಮುನ್ನ ತಾಲೂಕಿನ ರ‍್ಮಸಾಗರದ ಅಂಗನವಾಡಿ ಕೇಂದ್ರ ಶಾಸಕ ಎಚ್.ಆರ್.ಗವಿಯಪ್ಪ ಬುಧವಾರ ಉದ್ಘಾಟಿಸಿದರು. ನಂತರ ಗ್ರಾಮದಲ್ಲಿ ಸಂಚರಿಸಿದರು. ರ‍್ಕಾರಿ ಪ್ರಾಥಮಿಕ ಶಾಲೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಳಿಕ ಜನಸಂರ‍್ಕ ಸಭೆ ನಡೆಸಿ ಸರ‍್ವಜನಿಕರ ಕುಂದು ಕೊರತೆ ಆಲಿಸಿದರು. ಈ ವೇಳೆ ಜನರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ರೈತರ ಪೋಡಿ ಸಮಸ್ಯೆ, ಕಂದಾಯ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಜನರು ಅಹವಾಲು ಸಲ್ಲಿಸಿದರು.
ತಹಸೀಲ್ದಾರ್ ವಿಶ್ವಜಿತ್ ಮೆಹತಾ, ತಾಪಂ ಇಒ ಹರೀಶ್, ಬೈಲುವದ್ದಿಗೇರಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಹುಲಿಗೆಮ್ಮ ಇತರರಿದ್ದರು.