

ಹೊಸಪೇಟೆ: ಗಾಳೆಮ್ಮನಗುಡಿ ಗ್ರಾಮದ ಬಳಿಯ ಎಂ.ಎಸ್.ಪಿ.ಎಲ್. ಗಣಿಪ್ರದೇಶವನ್ನು ಜೆಎಸ್‌ಡಬ್ಲ್ಯೂ ಗುತ್ತಿಗೆ ಪಡೆದು ಗಣಿಗಾರಿಕೆಗಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಆಲಿಕೆ ಸಭೆಯನ್ನು ರದ್ದುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ ಒತ್ತಾಯಿಸಿದರು.
ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಗಾಳೆಮ್ಮನಗುಡಿಯ ರಾಷ್ಟಿçÃಯ ಹೆದ್ದಾರಿ ಬಳಿಯ ಭಾನುವಾರ ನಡೆದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಎಸ್‌ಡಬ್ಲ್ಯೂ ಗಣಿಗಾರಿಕೆ ನಡೆಸಲು ಉದ್ದೇಶಿತ ಪ್ರದೇಶದಿಂದ ಬರುವ ಹಳ್ಳ ಮುಚ್ಚಿ ಹೋಗಿದೆ. ಇದರಿಂದ ಮಳೆಗಾಲದಲ್ಲಿ ಹಳ್ಳದ ನೀರು ಗ್ರಾಮದಲ್ಲಿ ಮನೆಗಳಿಗೆ ನುಗ್ಗುತ್ತದೆ. ಅಲ್ಲದೇ ಲಾರಿಗಳ ಓಡಾಟದಿಂದ ಧೂಳು ಆವರಿಸುತ್ತದೆ. ಗಣಿಗಾರಿಕೆ ಪ್ರಕ್ರಿಯೆಯಿಂದ ಮನೆಗಳು ಬಿರುಕು ಬಿಟ್ಟಿವೆ. ಆದ್ದರಿಂದ ಸಾರ್ವಜನಿಕ ಆಲಿಕೆ ಸಭೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಆ ದಿನ ಗ್ರಾಮಸ್ಥರು ಉಗ್ರ ಹೋರಾಟ ಹಾಗೂ ಪ್ರಾಣತ್ಯಾಗಕ್ಕೂ ಸಿದ್ದ ಎಂದರು.
ಗ್ರಾಮದ ಮುಖಂಡ ಸಿ.ಡಿ.ಯಲ್ಲಪ್ಪ ಮಾತನಾಡಿ, ಜೆಎಸ್‌ಡಬ್ಲ್ಯೂ ಗಣಿಗಾರಿಕೆ ನಡೆಸಲು, ಕರೆದಿರುವ ಸಾರ್ವಜನಿಕ ಆಲಿಕೆಸಭೆ ರದ್ದುಗೊಳಿಸಬೇಕು. ಗಣಿಗಾರಿಕೆಯಿಂದ ಈಗಾಗಲೇ ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈಗ ಮತ್ತೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದರೆ, ಗ್ರಾಮಸ್ಥರು ಪೆಟ್ರೋಲ್ ಸುರಿದುಕೊಂಡು ಸಾಯಲು ಸಿದ್ದ ಎಚ್ಚರಿಸಿದರು.
ಜೆ.ಎಸ್.ಡಬ್ಲ್ಯೂ ಗಣಿಗಾರಿಕೆ ನಡೆಸಿದರೆ ಈ ಪ್ರದೇಶದಲ್ಲಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ. ಇದರಿಂದ ಗ್ರಾನಸ್ಥರು ಗ್ರಾಮವನ್ನೆ ತೊರೆಯುವ ಪರಿಸ್ಥಿತಿ ಎದುರಾಬಹುದು. ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶಿಸಿ ಸಾರ್ವಜನಿಕ ಆಲಿಕೆ ಸಭೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಡಾಣಪುರ ಗ್ರಾ.ಪಂ. ಸದಸ್ಯರಾದ ಉಮಾ ಯಲ್ಲಪ್ಪ, ಭಾಗ್ಯಮ್ಮ ಶ್ರೀನಿವಾಸ, ಪ್ರಮುಖರಾದ ಸಿ.ಡಿ.ನಾಗರಾಜ, ಸಿ.ಎ.ವೆಂಕಟೇಶ, ಶರತ್, ರಾನಕ್ಕ, ಬಜ್ಜಮ್ಮ, ಗಾಳೆಮ್ಮ, ಪರಶುರಾಮ, ಉಮೇಶ, ರಾಮಾಂಜನೇಯ, ಈಶ್ವರಗೌಡ, ಮಂಜುನಾಥ, ಸತೀಶ್ ಇತರರಿದ್ದರು.