ಗುಜರಾತ್ ಕಂಪನಿಗೆ ಗೇಟ್ ಅಳವಡಿಕೆ ಹೋಣೆ

16 MANJU 06
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನಿರ್ಮಾಣ ಮಾಡಲು ಗುಜರಾತ ಮೂಲದ ಕಂಪನಿಗೆ ಟೆಂಡರ್ ಆಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ಗುಜರಾತನ ಅಹಮದಾಬಾದ್‌ನ ಹಾರ್ಡ್ವೇರ್ ಟೂಲ್ಸ್ ಅಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ಇ-ಟೆಂಡರ್ ಆಗಿದೆ. ತುಂಗಭದ್ರಾ ಮಂಡಳಿ ಇ-ಟೆಂಡರ್ ಬಿಡ್ ಅನ್ನು ಗುರುವಾರ ಓಪನ್ ಮಾಡಿದ್ದು, ಗುಜರಾತನ ಕಂಪನಿ ಟೆಂಡರ್‌ನಲ್ಲಿ ಪಾಸಾಗಿದೆ. ಈ ಕಂಪನಿ ಮೈಸೂರಿನ ಕೆಎಆರ್‌ಎಸ್ ಡ್ಯಾಂನ ಗೇಟ್‌ಗಳನ್ನು ನಿರ್ಮಾಣ ಮಾಡಿದೆ. ಜತೆಗೆ ಫರಕ್ಕಾ ಡ್ಯಾಂಗೂ ಗೇಟ್ ನಿರ್ಮಾಣ ಮಾಡಿದ ಅನುಭವ ಹೊಂದಿದೆ. ಈ ಹಾರ್ಡ್ವೇರ್ ಟೂಲ್ಸ್ ಅಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ ಶೀಘ್ರದಲ್ಲೇ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆ.10ರ ತಡರಾತ್ರಿ ಕಳಚಿ ಬಿದ್ದಿತ್ತು. ಇದರಿಂದ ಕರ್ನಾಟಕ ಸೇರಿ ಆಂದ್ರ, ತೆಲಂಗಾಣದ ರೈತರಿಗೆ, ಕಾರ್ಖಾನೆಗಳಿಗೆ ಹಾಗೂ ಕೂಡಿವ ನೀರಿಗೂ ಆತಂಕ ಮೂಡಿತು. ಈ ಜಲಾಶಯಕ್ಕೆ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗಿತ್ತು. ಈ ಗೇಟ್ ಕಳಚಿ ಬಿದ್ದು, 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಬಳಿಕ ಪರಿಣತ ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಸ್ಟಾಪ್ ಲಾಗ್ ನಿರ್ಮಾಣ ಮಾಡಲಾಗಿತ್ತು. ಈಗ ಗೇಟ್‌ಗೆ ಕ್ರಸ್ಟ್ ಗೇಟ್ ನಿರ್ಮಾಣ ಕಾರ್ಯ ನಡೆಯಲಿದೆ. ಜತೆಗೆ ಇನ್ನೂ ಕೆಲ ದಿನಗಳಲ್ಲಿ ಉಳಿದ 32 ಕ್ರಸ್ಟ್ ಗೇಟ್‌ಗಳನ್ನು ಬದಲಿಸಲು ಇ- ಟೆಂಡರ್ ಕರೆಲಾಗುತ್ತದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net