ಹಂಪಿ ಸ್ಮಾರಕಗಳ ಮೇಲೆ ರೀಲ್ಸ್ ಹುಚ್ಚಾಟ

27 MANJU 04
Published on

ಹೊಸಪೇಟೆ: ಹಂಪಿ ಐತಿಹಾಸಿಕ ಸ್ಮಾರಕಗಳ ಮೇಲೆ ಫೋಟೋಗಳಿಗೆ ಪೋಸು ನೀಡುವುದು, ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದು ಅಧಿಕಾರಿಗಳಿಗೆಳು ಕಡಿವಾಣ ಹಾಕಬೇಕಿದೆ.

ಆಳರಸರ ಕಾಲದ ಐತಿಹಾಸಿಕ ದೇಗುಲ, ಮಂಟಪಗಳು, ಸ್ಮಾರಕಗಳು ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಜೀವಂತ ಪರಂಪರೆ ಆಗಿದೆ. ಈ ಪರಂಪರೆ ಮಹತ್ವ ಗೊತ್ತಿಲ್ಲದ ಕೆಲ ಪ್ರವಾಸಿಗರು ಮಾತ್ರ ಹಂಪಿ ಮಂಟಪಗಳ ಮೇಲೇರಿ ಹುಚ್ಚಾಟ ಮೆರೆಯುತ್ತಿದ್ದಾರೆ. ದೇಗುಲದ ಕಂಬಗಳು, ಮಂಟಪಗಳು, ಸ್ಮಾರಕಗಳನ್ನು ಮುಟ್ಟಬೇಡಿ ಎಂದು ಕಾವಲುಗಾರರು ಇದ್ದರೂ ಕಡಿವಾಣ ಮಾತ್ರ ಬಿಳುತ್ತಿಲ್ಲ. ಪುರಾತನ ಕಾಲದ ಸ್ಮಾರಕಗಳು ಬಿಳುವ ಹಂತದಲ್ಲಿದೆ. ಒಂದು ವೇಳೆ ಹತ್ತುವಾಗ ಅನಾಹುತಗಳಾದರೆ ಯಾರು ಹೋಣೆ? ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪ್ರವಾಸಿಗರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net