ಸದಸ್ಯರ ನೇಮಕಾತಿಗೆ ಅರ್ಜಿ

Published on

ಹೊಸಪೇಟೆ: ಜಿಲಾ ್ಲವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಸಂಘ, ಎನ್‌ಜಿಓ ಸದಸ್ಯರ ನೇಮಕಾತಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಇಲ್ಲಿನ ನಗರಸಭೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಮಲಾಪುರ, ಹೂವಿನಹಡಗಲಿ ಪುರಸಭೆಗಳಲ್ಲಿ ಹಾಗೂ ಕೂಡ್ಲಿಗಿ, ಕೊಟ್ಟೂರು, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಪೂರ್ಣಾವಧಿಗೆ 3 ವರ್ಷಗಳ ಕಾಲ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಆಸಕ್ತಿಯುಳ್ಳ ನಲ್ಮ್ ಡೇ, ಎನ್‌ಆರ್‌ಎಲ್‌ಎಂ, ಎನ್‌ಜಿಓ ಅಡಿಯಲ್ಲಿ ನೋಂದಾಯಿತ ಸ್ವಸಹಾಯ ಸಂಘ, ಎನ್‌ಜಿಓ ಸದಸ್ಯರಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಯಾ ಕಚೇರಿಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಏ.25 ರ ಸಂಜೆ 5 ಗಂಟೆಯೊಳಗೆ ನಿಗಧಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net