

ಹೊಸಪೇಟೆ: ಪ್ರತಿಯೊಬ್ಬರೂ ಪ್ರೀತಿ-ವಿಶ್ವಾಸ ಸಹನೆ ಸೌಹಾರ್ದತೆ ಮೂಲಕ ಬಾಳಿ ಹಿರಿಯರಿಗೆ ಗೌರವ ತರಬೇಕು ಎಂದು ಸಂಸದ ಈ.ತುಕಾರಾಂ ಹೇಳಿದರು.
ಈದ್ ಮಿಲಾದ್ ಹಬ್ಬದ ನಿಮಿತ್ತ ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿಯಿಂದ ನಗರದ ಅಂಜುಮನ್ ಶಾದಿ ಮಹಲ್‌ನಲ್ಲಿ ಭಾನುವಾರ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯ ಮೂರು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಕೊಠಡಿ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾಳಜಿ ಇರಬೇಕು. ಆರತಿಗೊಬ್ಬಳು ಕೀರ್ತಿಗೊಬ್ಬನು ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಹೊಂದಬೇಕು. ನಗರದಲ್ಲಿ ಶೀಘ್ರವಾಗಿ ಜನ ಸಂಪರ್ಕ ಕಚೇರಿ ತೆರೆಯುತ್ತೇನೆ. ವಿಶೇಷವಾಗಿ ಶಿಕ್ಷಣ ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಸರ್ವತೋಮುಖ …ಅಭಿವೃದ್ಧಿಗಾಗಿ ನಿಮ್ಮ ಜತೆ ಸದಾ ಇರುತ್ತೇನೆ ಎಂದರು.
ಕಮಿಟಿಯ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸಂಸ್ಥೆಯಿAದ ಉಚಿತ ಟೈಲರಿಂಗ್, ಕಂಪ್ಯೂಟರ್ ತರಬೇತಿ ಹಾಗೂ ಆಸ್ಪತ್ರೆ ಉಚಿತ ತಪಾಸಣೆ ರೀತಿಯ ಹಲವಾರು ಸೇವಾ ಕಾರ್ಯಕ್ರಮ ನಡೆಸುತ್ತದೆ. ಆಸ್ಪತ್ರೆ ನಡೆಸಲು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನಡೆಸಲು ಕಟ್ಟಡದ ಅವಶ್ಯಕತೆಯಿದೆ. ಇದಕ್ಕೆ 2 ಕೋಟಿ ರೂ. ಅವಶ್ಯಕತೆ ಇದೆ. ಅಭಿವೃದ್ಧಿ ಸೇವ ಕಾರ್ಯಕ್ರಮ ಕೇವಲ ಇಸ್ಲಾಂ ಧರ್ಮದವರಿಗಷ್ಟೇ ಸೀಮಿತವಾಗಿರುವುದಿಲ್ಲ. ನಗರದ ಎಲ್ಲಾ ಸಮಾಜದವರು ಈ ಒಂದು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವ ಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದರು. ಎಸ್ಪಿ ಬಿ.ಎಲ್.ಶ್ರೀಹರಿಬಾಬು, ನಗರಸಭಾ ಸದಸ್ಯ ಗೌಸ್, ಅಬ್ದುಲ್ ಖಾದರ್, ಪ್ರಮುಖರಾದ ಮೆಹಬೂಬ್ ಪೀರ್ ಸಾಬ್, ಬಿ.ಎಸ್.ಶ್ಯಾಮ್ ಸಿಂಗ್, ಪಿ.ಬಿ.ಎಸ್.ಸಂತೋಷ್, ಸಾಲಿ ಸಿದ್ದಯ್ಯಸ್ವಾಮಿ ಇತರರಿದ್ದರು.