

ಹೊಸಪೇಟೆ: ಜಮಿಅತ್ ಎ ಅಣ್ಣೆ ಹದೀಸ್ ಸಂಘಟನೆಯಿಂದ ನಗರದದಲ್ಲಿ ಮೊದಲ ಬಾರಿಗೆ ಭಾನುವಾರ ನಮ್ಮೂರ ಮಸೀದಿ ನೋಡ ಬನ್ನಿ ಕರ‍್ಯಕ್ರಮ ನಡೆಯಿತು.
ಚಪ್ಪರದಹಳ್ಳಿಯ ಮದೀನಾ ಜಾಮಿಯ ಮಸ್ಟಿದ್ ಅಥ್ಲೆ ಹದೀಸ್ ಮಸೀದಿಯಲ್ಲಿ ನಡೆದ ಕರ‍್ಯಕ್ರಮದಲ್ಲಿ ಮಾನವೀಯ ಮನೋಭಾವವನ್ನು ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ, ಸಹೋದರತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಇಸ್ಲಾಂ ರ‍್ಮದ ಹಲವು ಮಾಹಿತಿಗಳನ್ನು ಜಾಗೃತಿ ಮಂಡಿಸಲಾಯಿತು. ಮುಸ್ಲಿಮರು ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿಭಿನ್ನ ಕರ‍್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮಸೀದಿಯಲ್ಲಿ ಏನೆಲ್ಲ ನಡೆಯುತ್ತೆ ಅನ್ನೋ ವಿಚಾರಗಳು ರ‍್ಚೆಗೆ ಬಂದಿತ್ತು, ಅದರಲ್ಲೂ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿಚಾರಗಳು ರಾಜ್ಯದಲ್ಲಿ ಕೋಮು ಸೌಹರ‍್ದತೆಯನ್ನ ಕದಡಲು ಕಾರಣವಾಗಿತ್ತು. ಇಂತಹ ಸನ್ನಿವೇಶದಲ್ಲಿ ನಗರದ ವಿಭಿನ್ನ ಕರ‍್ಯಕ್ರಮ ಮಾಡುವ ಮೂಲಕ ಮುಸ್ಲಿಮರು ಗಮನ ಸೆಳೆದರು.
ವಿಶೇಷವಾಗಿ ಈ ಹಿಂದೆ ಮಸೀದಿ ಒಳಗೆ ಅನ್ಯ ರ‍್ಮಿಯರು, ಮಹಿಳೆಯರಿಗೆ ಕೆಲವು ನರ‍್ಬಂಧಗಳನ್ನ ಹೇರಲಾಗಿತ್ತು. ಆದರೆ ಇದೆಲ್ಲದಕ್ಕೂ ಮುಕ್ತ ಹೇಳುವ ಸಲುವಾಗಿ ಎಲ್ಲರಿಗೂ ಮುಕ್ತವಾಗಿ ಮಸೀದಿಗೆ ಸ್ವಾಗತ ಮಾಡಿ ಮಸೀದಿಗೆ ಪ್ರವೇಶ ಕೊಟ್ಟವರಿಗೆ ಸಾಕಷ್ಟು ಜನ ಗೈಡ್‌ಗಳು ಮಸೀದಿಯಲ್ಲಿ ಪ್ರರ‍್ಥನೆ ಸೇರಿದಂತೆ ಶಿಸ್ತು, ಎಲ್ಲವನ್ನ ತಿಳಿಸಿಕೊಟ್ಟರು. ಇನ್ನೂ ಹಿಂದೂ, ಕ್ರಿಶ್ಚಿಯನ್, ಮಹಿಳೆಯರು, ಮಕ್ಕಳು ಎಲ್ಲರಿಗೂ ಮಸೀದಿ ಹಾಗೂ ಪ್ರರ‍್ಥನೆ ಸಂಬಂಧ ಇದ್ದ ಎಲ್ಲಾ ವಿಚಾರಗಳ ಕುರಿತು ತಿಳಿಸಿಕೊಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾದ ಕುರ್‌ಆನ್ ಗ್ರಂಥವನ್ನು ಉಚಿತವಾಗಿ ನೀಡಲಾಯಿತು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಕರ‍್ಯಕ್ರಮದಲ್ಲಿ ಭಾಗಿ, ರಾಜ್ಯ, ದೇಶದಲ್ಲಿ ಸಾಮರಸ್ಯ ಬೆಳೆಯಲು ಧರ‍್ಮಿಕ ಕೇಂದ್ರಗಳು ದಾರಿದೀಪವಾಗಬೇಕು. ಕೇವಲ ಧರ‍್ಮಿಕವಾಗಿ ಕರ‍್ಯಾಚರಿಸದೆ, ಶೈಕ್ಷಣಿಕ, ಸಾಮಾಜಿಕವಾಗಿ ಕೂಡಾ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಟಿ.ಮಂಜುನಾಥ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ವಕ್ಸ್ ಬರ‍್ಡ್ ಜಿಲ್ಲಾ ಘಟಕದ ಅಧ್ಯಕ್ಷ ದಾದಾಪೀರ್, ಮುಖಂಡರಾದ ಕೆ.ಝಕಾವುಲ್ಲಾ, ಅಬ್ದುಲ್ ಜಬ್ಬಾರ್, ಡಾ.ಹಬೀಬುಲ್ಲಾ, ಮೌಲಾನಾ ಉಮರ್ ಫರೂಕ್, ಫಜಲುಲ್ಲಾ ಸಾಬ್, ಬಿ.ಹನೀಫ್, ಮುಶೀರ್ ಅಹ್ಮದ್, ಉಮರ್ ಫರೂಕ್ ಇತರರಿದ್ದರು.