

ಹೊಸಪೇಟೆ: ಶ್ರೀಮರಿದೇವ ಸಂಗೀತ ಸಾಂಸ್ಕೃತಿ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಕಡ್ಡಿರಾಂಪುರದಲ್ಲಿ ಗುರುವಾರ ರಾತ್ರಿ ಶ್ರೀ ಮರಿಸ್ವಾಮಿ ಜಾತ್ರಾ ನಿಮಿತ್ತ ಸಾಂಸ್ಕೃತಿಕೋತ್ಸವ ನಡೆಯಿತು.
ಹಂಪಿ ಗ್ರಾ.ಪಂ ಪಿಡಿಒ ಗಂಗಾಧರ ಮಾತನಾಡಿ, ಆಧುನಿಕ ಕಾಲದಲ್ಲಿ ಜಾತ್ರೆ, ಧಾರ್ಮಿಕ ಸಾಂಸ್ಕೃತಿಕ ಮಹೋತ್ಸವಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ. ನಮ್ಮ ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಜಾತ್ರಾ ಸಮಯದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯವಿದೆ ಎಂದರು.
ಕಾರ್ಯಕ್ರಮಗಳಲ್ಲಿ ಕೊಪ್ಪಳ ಗವಿಮಠದ ಸ್ವರ ಸಂಚಾರ ಕಲಾತಂಡದ ಕಲಾವಿದರಿಂದ ಶಾಸ್ತಿçÃಯ ಸಂಗೀತ ದಾಸರ ಪದಗಳು ನಡೆದವು. ಹೊಸಪೇಟೆಯ ಸುಗುಣ ಮತ್ತು ತಂಡದಿAದ ಭರತನಾಟ್ಯ, ಅಮೃತ ತಂಡದಿAದ ಜಾನಪದ ನೃತ್ಯ, ಸುಮಾ ಕಾಳಘಟ್ಟ ಅವರಿಂದ ಸುಗಮ ಸಂಗೀತ, ಯಲ್ಲಪ್ಪ ಬಂಡಾರ್‌ದಾರ್ ಅವರಿಂದ ಜಾನಪದ ಗೀತೆಗಳು, ಅಂಗಡಿ ಸಮರ್ಥ, ನವ್ಯ ಅಂಗಡಿ ಅವರಿಂದ ವಚನಗಾಯನ, ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ನಡೆದವು.
ಹಂಪಿ ಗ್ರಾ.ಪಂ. ಅಧ್ಯಕ್ಷೆ ರಜಿನಿ ಷಣ್ಮುಖಗೌಡ ಅಧ್ಯಕ್ಷತೆ ವಹಿಸಿದರು. ಬಿ.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಎಂ.ವೃಷಬೇAದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್, ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ತುರುವನೂರು, ಪಿ.ಡಿ.ಒ. ಗಂಗಾಧರ, ಉಪಾಧ್ಯಕ್ಷ ಹನುಮಂತಪ್ಪ, ಸದಸ್ಯರಾದ ಕೆ.ಗೋಪಾಲ್, ರೇಣುಕಮ್ಮ, ಹುಲಿರಾಜ್, ವೀರೇಶ್ ಹಿಟ್ನಾಳ್, ಕಲಾವೃಂದದ ಅಧ್ಯಕ್ಷ ಅಂಗಡಿ ವಾಮದೇವ್ ಇತರರಿದ್ದರು.