

ಮರಿಯಮ್ಮನಹಳ್ಳಿ: ಪಟ್ಟಣದ ಆರಾದ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿಯ ನೂತನ ಜೋಡಿ ರಥೋತ್ಸವವು ಬಹಳ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
ನೂತನ ರಥಗಳಿಗೆ ರಿಮೋಟ್ ಕಂಟ್ರೋಲ್ ಪವರ್ ಬ್ರೇಕರ್ ಹಾಗೂ ಸ್ಟೇರಿಂಗ್ ಅಳವಡಿಸಿರುವುದರಿಂದ ಸುಸೂತ್ರವಾಗಿ ರಥಗಳನ್ನು ಎಳೆದು ಮತ್ತೆ ಮೂಲ ಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ರಥೋತ್ಸವದ ಹಿನ್ನಲೆಯಲ್ಲಿ ಉಭಯ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಹಿಂದೂ, ಮುಸ್ಲೀಮರು ಸೇರಿದಂತೆ ವಿವಿಧ ಸಮುದಾಯಗಳ ಭಕ್ತಾದಿಗಳು ಬೆಳಗಿನಿಂದಲೇ ಭಕ್ತರು ದೇವರ ದರ್ಶನ ಪಡೆದು ಹೂವು ಹಣ್ಣು ಕಾಯಿ ಅರ್ಪಿಸಿ ಪುನೀತರಾದರು. ಭಕ್ತರು ಹೊತ್ತ ಉರುಳು ಸೇವೆ, ದೀರ್ಘದಂಡ ನಮಸ್ಕಾರ ಸೇರಿದಂತೆ ವಿವಿಧ ಹರಕೆಗಳನ್ನುತೀರಿಸಿ ಪುನಿತರಾದರು.
ರಥೋತ್ಸವ ಮುನ್ನ ಎರಡೂ ರಥೋತ್ಸವ ಪಟಹರಾಜು ಮಾಡಲಾಯಿತು. ಮಂಜು ಎಂಬುವವರು ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಪಟವನ್ನು 8 ಲಕ್ಷ ರೂಪಾಯಿಗಳಿಗೆ ಹಾಗೂ ಆಂಜನೇಯಸ್ವಾಮಿ ಪಟವನ್ನು ಕೆ.ಬಾಲು ಎಂಬುವರು 12.10 ಲಕ್ಷ ರೂ. ಹರಾಜು ಕೂಗಿ ಪಡೆದರು. ರಥೋತ್ಸವದ ಹಿನ್ನಲೆಯಲ್ಲಿ ಪೊಲೀಸ್ ಸೂಕ್ತ ಬಂದೋಬಸ್ತು ಕೈಗೊಂಡರು.
ಶಾಸಕ ನೇಮಿರಾಜ್ ನಾಯ್ಕ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಮಾಜಿ ಸಂಸದ ಬಿ.ಶ್ರೀರಾಮುಲು ಇತರರು ಭಾಗಿಯಾಗಿದ್ದರು.