

ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ 32 ತಿಂಗಳ ನಂತರ ಮೊದಲ ಅವಧಿಯ ಅಧ್ಯಕ್ಷರಾಗಿ ಅದಿಮನಿ ಹುಸೇನ್ ಬಾಷಾ ಮತ್ತು ಉಪಾಧ್ಯಕ್ಷರಾಗಿ ಆರ್.ಲಕ್ಷ್ಮೀ ಶುಕ್ರವಾರ ಅವಿರೋಧ ಆಯ್ಕೆಯಾದರು.
ನಿಗದಿತ ಸಮಯದೊಳಗೆ ಇಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ಶೃತಿ ಎಂ.ಮಳನಗೌಡ್ರ ಸಾಮಾನ್ಯ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಅದಿಮನಿ ಹುಸೇನ್ ಬಾಷಾ, ಎಸ್ಟಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಲಕ್ಷ್ಮೀ ಅವರ ಹೆಸರು ಘೋಷಣೆ ಮಾಡಿದರು.
ಪಟ್ಟಣ ಪಂಚಾಯಿತಿಯ 18 ಸದಸ್ಯರಿದ್ದಾರೆ. 13 ಸದಸ್ಯರು ಕಾಂಗ್ರೆಸ್‌ನವರಾಗಿದ್ದು, 04 ಬಿಜೆಪಿ ಹಾಗೂ 01 ಪಕ್ಷೇತರ ಅಭ್ಯರ್ಥಿಯಾಗಿದ್ದರು. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಬಣದ ಸದಸ್ಯರು ಅಧಿಕಾರ ವಹಿಸಿದರು. 13 ಸದಸ್ಯರು ಹಾಗೂ ಸಂಸದ ಈ.ತುಕಾರಾಮ್ ಆಯ್ಕೆ ಪ್ರಕ್ರಿಯೆ ನಡೆಯಿತು. 2021ರ ಡಿ.30ರಂದು ನಡೆದ ಫಲಿತಾಂಶ 32 ತಿಂಗಳ ಬಳಿಲ ಕೊನೆಗೂ ಕಾಲ ಕುಡಿಬಂತು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಡಳಿತ ಚುಕ್ಕಾಣಿ ಹಿಡಿದರು.
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಪಟ್ಟಣವನ್ನು ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಲಾಗಿದೆ. ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ. ಈ.ತುಕಾರಾಮ್, ಸಂಸದ, ಬಳ್ಳಾರಿ