ಹಸ್ತಪ್ರತಿಗಳಿಂದಲೇ ನಾಗರೀಕತೆಗಳ ಇತಿಹಾಸ

25 MANJU 01
Published on

ಹೊಸಪೇಟೆ: ಲಿಖಿತ ಆಧಾರಗಳಿಂದ ಬರೆದ ಇತಿಹಾಸ ವಾಸ್ತವಿಕತೆಗೆ ಹತ್ತಿರವಿರುತ್ತದೆ. ವಸ್ತುನಿಷ್ಠವಿಲ್ಲದೆ ಬರೆದ ದಾಖಲೆಗಳು ಅವಾಸ್ತವೆನಿಸುತ್ತವೆ. ಎಲ್ಲ ನಾಗರೀಕತೆಗಳ ಇತಿಹಾಸ ಹಸ್ತಪ್ರತಿಗಳಿಂದಲೇ ಆಗಿದೆ ಎಂದು ನಿವೃತ್ತ ಐಎಎಸ್ ಪಿ.ಎನ್.ಶ್ರೀನಿವಾಸಾಚಾರಿ ಹೇಳಿದರು.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ಸಂಶೋಧಕ ಒಂದೇ ಸಿದ್ಧಾಂತಕ್ಕೆ ಜೋತುಬಿದ್ದರೆ ಬೇರೆ ಸಿದ್ಧಾಂತಗಳನ್ನು ಮುಕ್ತವಾಗಿ ನೋಡದಿದ್ದರೆ ಸಂಶೋಧಕ ನಿಸ್ಪಕ್ಷಪಾತವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಬಾದಾಮಿಯಲ್ಲಿ ನಡೆದ ಉತ್ಖನನದಲ್ಲಿ ಕಂಡುಬAದ ವೈಷ್ಣವ ದೇಗುಲ, ಜೈನ ದೇಗುಲ, ಶೈವ ದೇಗುಲಗಳು ನಮ್ಮಲ್ಲಿರುವ ಧರ್ಮ ಸಹಿಷ್ಣತೆಯನ್ನು ಹೇಳುತ್ತವೆ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ಮಾತನಾಡಿ, ಧರ್ಮ ಮತ್ತು ಶಾಸ್ತç ಇವತ್ತಿನ ಸಮ್ಮೇಳನದಲ್ಲಿ ಒಟ್ಟಿಗೆ ಸೇರಿದೆ. ಭಾರತದ ಸಾಹಿತ್ಯ ಚರಿತ್ರೆ ಹಾಗೆಯೇ ಕರ್ನಾಟಕಕ್ಕೆ ಸಂಬAಧಪಟ್ಟAತೆ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಧರ್ಮ ಮತ್ತು ಜ್ಞಾನ ಜತೆಯಾಗಿ ಹೆಜ್ಜೆ ಹಾಕಿವೆ. ಜ್ಞಾನದ ಮೂಲ ಆಕರಗಳೆಂದರೆ ಹಸ್ತಪ್ರತಿಗಳು. ಜ್ಞಾನವನ್ನು ನೋಡುವುದು, ಕೇಳುವುದು, ಓದುವುದು, ಬರೆಯುವುದರ ಮೂಲಕ ಜತೆಗೆ ಸ್ಪರ್ಷದ ಮೂಲಕ ಪಡೆಯುತ್ತಿದ್ದೇವೆ. ಹಸ್ತಪ್ರತಿಗಳನ್ನು ನೋಡದಿದ್ದರೆ ಜ್ಞಾನಪರಂಪರೆಯ ವೈಭವ ತಿಳಿಯಲು ಆಗುತ್ತಿರಲಿಲ್ಲ. ನಮ್ಮ ನಿರ್ಲಕ್ಷö್ಯದಿಂದ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕೃತಿಗಳು ಕವಿಗಳ ಕೊಂಡಿಗಳನ್ನು ಬೆಸೆಯಲು ಸಿಗುತ್ತಿಲ್ಲ. ಆಧುನಿಕತೆಯ ವೇಗದ ಧಾವಂತದಲ್ಲಿ ಅನೇಕ ಜ್ಞಾನ ಶಿಸ್ತುಗಳು ಕಾಣೆಯಾಗುತ್ತಿವೆ. ಹಾಗಾಗಿ ಕಾಣೆಯಾಗುತ್ತಿರುವ ಜ್ಞಾನಶಿಸ್ತುಗಳ ಕಡೆ ಮತ್ತೆ ಮತ್ತೆ ತಿರುಗಿ ನೋಡುವ ಪ್ರಯತ್ನಗಳೇ ಶಾಸನಶಾಸ್ತç ಮತ್ತು ಹಸ್ತಪ್ರತಿಶಾಸ್ತç ವಿಭಾಗಗಳು ಆಗಿವೆ. ಹುದುಗಿರುವ ಅಪಾರ ಜ್ಞಾನರಾಶಿಯನ್ನು ನಾವು ಹುಡುಕಬೇಕಾಗಿದೆ ಎಂದರು.

ರಾಜ್ಯ ವಿಶ್ವಬ್ರಾಹ್ಮಣ ಮಠಾಧಿಪತಿ ಶ್ರೀ ರಾಮಚಂದ್ರ ಸ್ವಾಮೀಜಿ, ಮಳೆಯರಾಜೇಂದ್ರ ಮಠ ಜಗನ್ನಾಥ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಜ್ಞಾನಾನಂದ, ಶಿರಸಂಗಿಯ ವಿಶ್ವಕ್ರಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ.ಬಡಿಗೇರ, ಪ್ರಾಧ್ಯಾಪಕರಾದ ಡಾ.ವೀರೇಶ ಬಡಿಗೇರ, ಡಾ.ಚಂದ್ರಶೇಖರ ಕಾಳನ್ನವರ, ಡಾ.ಲಕ್ಷಿö್ಮÃಕಾಂತ ಪಂಚಾಳ, ಪ್ರಮುಖರಾದ ನಾಗರಾಜ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net