ಸೂಕ್ರ ಚಿಕಿತ್ಸೆ ಪಡೆದರೆ ಕುಷ್ಠ ನಿವಾರಣೆ

30012022 Hospete Martyrs Day
Published on

ತಾಲೂಕು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಪ್ರತಿಪಾದನೆ| ಕುಷ್ಠ ಶಾಪವಲ್ಲ ಗುಣವಾಗುತ್ತದೆ


ಹೊಸಪೇಟೆ: ಕುಷ್ಠರೋಗ ಶಾಪವಲ್ಲ. ಇದು ಲೆಪ್ರಾ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆ. ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗಬಹುದು ಎಂದು ತಾಲೂಕು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಹೇಳಿದರು.

ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ನಗರದ ಮುಕ್ತಿ ಧಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕುಷ್ಠರೋಗದಿಂದ ಚೇತರಿಸಿಕೊಂಡವರಿಗೆ ಮತ್ತು ಕುಷ್ಠರೋಗಿಗಳ ಹನ್ನೊಂದು ಕುಟುಂಬಗಳಿಗೆ ತಲಾ ಐದು ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾರಿಗಾದರೂ ಮೈಮೇಲೆ ಮಚ್ಚೆಗಳು ಕಂಡ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಕುಷ್ಠರೋಗಕ್ಕೆ ಇದೆ. ಪಿ.ಬಿ.(ಆರು ತಿಂಗಳ ಚಿಕಿತ್ಸೆ) ಮತ್ತು ಎಂ.ಬಿ. (ಹನ್ನೆರಡು ತಿಂಗಳ ಚಿಕಿತ್ಸೆ) ಎಂದು ಎರಡು ವಿಧಗಳಲ್ಲಿ ಚಿಕಿತ್ಸೆ ಇರುತ್ತದೆ ಎಂದು ಮಾಹಿತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net