ಮಹಾಶಿವರಾತ್ರಿ, ಹಂಪಿ ವಿರೂಪಾಕ್ಷೇಶ್ವರನ ದರುಶನ ಪಡೆದ ಭಕ್ತಗಣ

Hampi Virupakshewara God
ಹಂಪಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು. ಹಂಪಿ ವಿರೂಪಾಕ್ಷ ಮೂರ್ತಿಗೆ ಚಿನ್ನದ ಕಿರೀಟ ಅಲಂಕಾರ ಮಾಡಲಾಗಿತ್ತು.
Published on

ಹೊಸಪೇಟೆ: ಮಹಾಶಿವರಾತ್ರಿ ನಿಮಿತ್ತ ಭಕ್ತರು ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿ ಗುರುವಾರ ಪುಣ್ಯಸ್ನಾನ ಮಾಡಿ, ವಿರೂಪಾಕ್ಷೇಶ್ವರನ ದರುಶನ ಪಡೆದರು. ನಾನಾ ಅಭಿಷೇಕ ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು. ವಿರೂಪಾಕ್ಷೇಶ್ವರನಿಗೆ ಬೆಳಗ್ಗೆ 6.30 ರಿಂದ ವಿದ್ಯಾರಣ್ಯ ಭಾರತಿ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ಮೂರ್ತಿಗೆ ಚಿನ್ನದ ಕಿರೀಟ ಅಲಂಕಾರ ಮಾಡಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net