ಸೋಲೇ ಗೆಲುವಿನ ಮೆಟ್ಟಿಲು: ಡಿಐಜಿಪಿ ಬಿ.ಎಸ್. ಲೋಕೇಶ ಕುಮಾರ್ ಹೇಳಿಕೆ

191122 Hospet District Police Annual Sports
ಹೊಸಪೇಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಹೊಸಪೇಟೆ ತಂಡಕ್ಕೆ ಡಿಐಜಿಪಿ ಬಿ.ಎಸ್. ಲೋಕೇಶ ಕುಮಾರ ಪ್ರಶಸ್ತಿ ವಿತರಿಸಿದರು.
Published on

ಹೊಸಪೇಟೆ: ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಕ್ರೀಡಾಪಟುಗಳು ಮರೆಯಬಾರದು. ನಿರಂತರ ಪ್ರಯತ್ನದೊಂದಿಗೆ ಸಾಧನೆ ಮಾಡಬೇಕು ಎಂದು ಬಳ್ಳಾರಿ ವಲಯ ಡಿಐಜಿಪಿ ಬಿ.ಎಸ್. ಲೋಕೇಶ ಕುಮಾರ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಎರಡು ದಿನಗಳ ಕ್ರೀಡಾಕೂಟದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡಿರುವುದು ಅಭಿನಂದನೀಯ ಎಂದರು.

ಎಸ್ಪಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ವಾರ್ಷಿಕ ಕ್ರೀಡಾಕೂಟ ಒತ್ತಡಗಳ ನಿವಾರಣೆಗೆ ಸಹಕಾರಿಯಾಗಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net