ಪಲ್ಟಿಯಾದ ಲಾರಿ ಚೆಲ್ಲಾಪಿಲ್ಲಿಯಾದ ಕಬ್ಬು

25 MANJU 06
Published on

ಹೊಸಪೇಟೆ: ಕಾರ್ಖಾನೆ ಕಬ್ಬು ತುಂಬಿಕೊAಡು ತೆರಳುತ್ತಿದ್ದ ಲಾರಿಯೊಂದು ತಾಲೂಕಿನ ಕಮಲಾಪುರದ ಐತಿಹಾಸಿಕ ಕೆರೆ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಬ್ಬಿನ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಕಳೆದ ಕೆಲ ದಿನಗಳಿಂದ ಕಬ್ಬಿನ ಕಟಾವು ಹಾಗೂ ಕಾರ್ಖಾನೆಗಳಿಗೆ ಸಾಗಣೆ ಭರದಿಂದ ಸಾಗಿದೆ. ಕಮಲಾಪುರದ ಕೆರೆತಾಂಡಾದ ಮಾರ್ಗವಾಗಿ ಬರುವ ಲಾರಿಗಳು ಕೆರೆಯ ಮೇಲಿನ ರಸ್ತೆ ಕಿರಿದಾಗಿದ್ದು, ಅದೂ ಕೂಡ ಹದಗೆಟ್ಟಿದೆ. ಇಂತಹ ಇಕ್ಕಟ್ಟಾದ ರಸ್ತೆಯಲ್ಲಿ ಎರಡು ಟ್ರಾಲಿ ತುಂಬಿದ ಕಬ್ಬಿನ ಟ್ರ‍್ಯಾಕ್ಟರ್‌ಗಳು ಚಲಿಸುತ್ತಿವೆ. ಪ್ರತಿನಿತ್ಯವೂ ಈ ಭಾಗದಲ್ಲಿ ವಾಹನ ಸವಾರರಿಗೆ ಕಿರಿಕಿರಿ ಸಾಮಾನ್ಯವಾಗಿದೆ.

ಲಾರಿ ಪಲ್ಟಿಯಾಗಿದ್ದರಿಂದ ಈ ರಸ್ತೆಯ ತುಂಬ ಕಬ್ಬುಗಳು ಹರಡಿದ್ದವು. ಮತ್ತೆ ತುಂಬಲು ಹರ ಸಾಹಸ ಪಟ್ಟರು. ವಾಹನ ಚಾಲನೆ ಮಾಡುವ ಚಾಲಕರು ಈ ರಸ್ತೆಗಳಲ್ಲಿ ಸಂಚರಿಸುವಾಗ ಜಾಗೂರಕತೆ ವಹಿಸುವುದು ಅಗತ್ಯವಾಗಿದೆ. ಕಮಲಾಪುರದ ಮೀನುಗಾರ ಓಣಿಯಿಂದ ಕೆರೆತಾಂಡಾಕ್ಕೆ ಹೋಗುವ ದಾರಿ ಅಲ್ಲದೇ ಇಕ್ಕಟ್ಟಾದ ರಸ್ತೆಯನ್ನು ದುರಸ್ತಿ ಮಾಡಬೇಕು. ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ. ಇನ್ನು ಮಿತಿಮೀರಿ ಕಬ್ಬನ್ನು ತುಂಬಿಕೊAಡು ಲಾರಿಗಳು ಸಂಚರಿಸುತಿದ್ದರೂ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಅದಕ್ಕಾಗಿ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮಿತಿಮೀರಿ ಕಬ್ಬನ್ನು ತುಂಬಿಕೊAಡು ಸಂಚರಿಸುವ ಲಾರಿಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net