ಅಧಿಕಾಕಾರಿಗಳ ವಿರುದ್ಧ 24 ಸ್ವಯಂಪ್ರೇರಿತ ದೂರು

15 MANJU 09
Published on

ಹೊಸಪೇಟೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಸದಲ್ಲಿ ಇಲಾಖೆಗಳಲ್ಲಿ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ 24 ಸ್ವಯಂಪ್ರೇರಿತ ದೂರು ದಾಖಲಿಸ¯ಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.

ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಗಳಿಗೆ ಅನಿರಿಕ್ಷೀತ ಭೇಟಿ ನೀಡಲಾಗಿದ್ದು, ದಿಕ್ಕು ತಪ್ಪಿಸಲು ಅಧಿಕಾರಿಗಳು ಹಲವು ಪ್ರಯತ್ನಗಳನ್ನು ಮಾಡಿದರು. ಮೂರು ದಿನಗಳ ಕಾಲ ಪರಿಶೀಲನೆ ಅಲ್ಲಿಯ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಬೇಜಾರಾಯಿತು. ಫೋನ್ ಪೇ, ಗೂಗಲ್ ಪೇ ಮೂಲಕ ನಡೆಯುತ್ತಿದ್ದ ಸರ್ಕಾರಿ ಸಿಬ್ಬಂದಿಯ ಅಕ್ರಮಗಳು ಪತ್ತೆಯಾದವು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.

ಮೊದಲ ಮತ್ತು ಮೂರನೇ ದಿನ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ 294 ಪ್ರಕರಣಗಳಲ್ಲಿ 85 ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ. ಎರಡನೇ ದಿನ 28 ಇಲಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಕ್ರಮವಾಗಿ ಹಾಗೂ ನಿಯಮ ಬಾಹಿರವಾಗಿ ನಡೆದುಕೊಳ್ಳುವ 24 ಅಧಿಕಾರಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲು ಮಾಡಲು ಸೂಚನೆ ನೀಡಲಾಗಿದೆ. ಅಧಿಕಾರ, ಸಂಪತ್ತಿಗೋಸ್ಕರ ಹೋರಾಟ ಮಾಡುವುದನ್ನು ಬಿಟ್ಟು ಸಮಾಜದ ಬಗ್ಗೆ ಪ್ರೀತಿ ಬೆಳೆಸಿಕೊಂಡು ಒಳ್ಳೆ ಕೆಲಸ ಮಾಡಬೇಕು. ಸುಳ್ಳು ಪ್ರಕರಣ ದಾಖಲಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಸಂಘ-ಸAಸ್ಥೆಗಳ ಹೆಸರಿನಲ್ಲಿ ವಯಕ್ತಿಕವಾಗಿ ಮಹನೀಯರ ಫೋಟೊ ಹಾಕಿಕೊಳ್ಳಬಾರದು. ರಾಷ್ಟ್ರಲಾಂಛನ ಸೇರಿ ಫೋಟೊ ಬಳಸುವುದು ಅಪರಾಧ ಎಂದು ಸಲಹೆ ನೀಡಿದರು.\

ಅಕ್ರಮ ಮಣ್ಣು ಪ್ರಕರಣ ದಾಖಲು

ಶನಿವಾರ ಸಂಕ್ಲಾಪುರ ಹತ್ತಿರವಿರುವ ನಗರಸಭೆ ಘನತ್ಯಾಜ್ಯ ವಿಲೆವಾರಿ ಘಟಕಕ್ಕೆ ಭೇಟಿ ನೀಡಿ ನಂತರ ತಾಲೂಕಿನ ಕಲ್ಲಹಳ್ಳಿ ರಾಜಾಪುರದ ಸರ್ವೆ ನಂ.144 ರಲ್ಲಿ ವಲಿನಾಯಕ್‌ಗೆ ಸೇರಿದ 4.81 ಸೆಂಟ್ಸ್ ಜಮೀನಿನಲ್ಲಿ ಹತ್ತು ಅಡಿಗಿಂತಲೂ ಆಳವಾಗಿ, ಕೃಷಿ ಮಾಡಲು ಸಾಧ್ಯವಿಲ್ಲದಂತೆ ಮಣ್ಣು ಅಗೆದು ಸಾಗಾಣಿಕೆ ಮಾಡಿರುವುದನ್ನು ವೀಕ್ಷಣೆ ಮಾಡಿದರು. ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಕಂಡು ಬಂದಿತು. ಸರ್ಕಾರದ ಆಸ್ತಿ ಸಂರಕ್ಷಣೆ ಮಾಡಬೇಕಾದವರು ಅಧಿಕಾರಿಗಳಾಗಿದ್ದು ಮುಂದಿನ ಭವಿಷ್ಯಕ್ಕೆ ಚಿಪ್ಪು ನೀಡಲು ಹೊರಟಿದ್ದೀರಾ? ಇದು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳಿಗೆ ತರಾಟೆ ತಗೆದುಕೊಂಡರು. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು. ಇನ್ನೂ ಅಂದಾಜು 48 ಲಕ್ಷ ರೂ. ವೆಚ್ಚದ 9.6 ಸಾವಿರ ಮೇಟ್ರಿಕ್ ಟನ್ ಮರಂ ಮಣ್ಣು ವಶಕ್ಕೆ ಪಡೆದು ಆರೋಪಿ ವಲಿನಾಯಕ್ ಹಾಗೂ ಇಟಾಚಿ ಆಪರೆಟರ್ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಲೆವಾರಿಘಟಕಕ್ಕೆ ಭೇಟಿ

ಸಂಕ್ಲಾಪುರ ಸಮೀಪ 55 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ, ಪ್ರತಿನಿತ್ಯ ನಗರದಿಂದ ಉತ್ಪತ್ತಿಯಾಗುವ 130 ಟನ್ ಘನತ್ಯಾಜ್ಯ ಘಟಕ, ಹಸಿ ಕಸ, ಒಣಕಸವನ್ನು ಬೇರ್ಪಡಿಸಿ ಸಾವಯುವ ಗೊಬ್ಬರವನ್ನಾಗಿ ತಯಾರಿಸುವುದನ್ನು ವೀಕ್ಷಣೆ ಮಾಡಿದರು. ನಗರಸಭೆಯ ಘನತ್ಯಾಜ್ಯ ಸಂಸ್ಕರಿಸಿ ತಯಾರಿಸುವ ಸಾವಯುವ ಗೊಬ್ಬರದಿಂದ ತರಕಾರಿ ಬೆಳೆ ಬೆಳೆದು, ನಂತರ ಆಹಾರ ಸುರಕ್ಷತಾದೃಷ್ಟಿಯಿಂದ ತರಕಾರಿಯನ್ನು ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಿದರು.

ಉಪಕಾರಾಗೃಹಕ್ಕೆ ಭೇಟಿ

ನಗರದ ಉಪಕಾರಾಗೃಹಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನೀಡಲಾಗುತ್ತಿರುವ ಮೂಲಸೌಕರ್ಯ ಮತ್ತು ಕೈದಿಯ ಪರವಾಗಿ ವಾದ ಮಾಡಲು ನೇಮಕ ಮಾಡಿಕೊಂಡಿರುವ ವಕೀಲರುಗಳ ಬಗ್ಗೆ ಮಾಹಿತಿ ಪಡೆದು, ವಕೀಲರಿಲ್ಲದ ವಿಚಾರಣಾಧೀನ ಕೈದಿಗಳಿಬ್ಬರಿಗೆ ಸರ್ಕಾರಿ ವಕೀಲರನ್ನು ನೇಮಕ ಮಾಡಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net