ನಾಳೆ ಲೋಕಾಯುಕ್ತ ಜನ ಸಂಪರ್ಕ ಸಭೆ

Published on

ಹೊಸಪೇಟೆ: ರಾಜ್ಯ ಲೋಕಾಯುಕ್ತ ಘಟಕದಿಂದ ಸೆ.11 ರಿಂದ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಜನ ಸಂಪರ್ಕ ಸಭೆ ಗಳು ನಡೆಯಲಿವೆ.

ಸೆ.11 ರಂದು ಹೂವಿನಹಡಗಲಿ ತಾಲೂಕು ಕಚೇರಿ ಸಭಾಂಗಣ, ಸೆ.18 ರಂದು ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣ, ಸೆ.24 ರಂದು ಹೊಸಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆವರೆಗೆ ಸಭೆ ನಡೆಯಲಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳು, ಅಹವಾಲುಗಳು ಹಾಗೂ ತಮ್ಮ ಸರ್ಕಾರಿ ಕೆಲಸಗಳಿಗೆ ಸಂಬAಧಿಸಿದAತೆ ಸರ್ಕಾರಿ ಕಚೇರಿಗಳಲ್ಲಿ ಅನಗತ್ಯ ವಿಳಂಬತೆ, ಕಿರುಕುಳ, ತೊಂದರೆ ಮತ್ತು ಅಧಿಕಾರಿ ಸಿಬ್ಬಂದಿಯ ದುರಾಡಳಿತಕ್ಕೆ ಸಂಬAಧಿಸಿದ ದೂರುಗಳನ್ನು ಸಂಬAಧಿಸಿದ ತಾಲೂಕುಗಳಲ್ಲಿ ದ್ವಿಪ್ರತಿಯಲ್ಲಿ ದೂರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಲೋಕಾಯುಕ್ತ ಹೊಸಪೇಟೆ ಘಟಕದ ಪೊಲೀಸ್ ಉಪಾಧೀಕ್ಷಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net