ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಚಾರ ತನಿಖೆಯಾಗಲಿ!

Published on

ಹೊಸಪೇಟೆ: ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲ ಅಧಿಕಾರಿಗಳು ಭಷ್ಟಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಲೋಕಾಯುಕ್ತ ಸಂಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಜನರಿಗೆ ಉತ್ತಮ ಹಾಗೂ ಭ್ರಷ್ಟಚಾರ ಮುಕ್ತ ಸೇವೆಯನ್ನು ಒದಗಿಸಬೇಕು ಎಂದು ಕೆಆರ್‌ಎಸ್ ಪಕ್ಷದ ಎಸ್ಸಿಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಪ.ಯ ಗಣೇಶ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟ ಅಧಿಕಾರಿಗಳು ಜನರ ಬಳಿ ಹಣದ ಬೇಡಿಕೆ ಇಟ್ಟ ವಿಚಾರವನ್ನು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದಾಗ ಅದನ್ನು ಲಂಚಕೋರ ಅಧಿಕಾರಿಗಳ ಗಮನಕ್ಕೆ ತಂದು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಪ್ರತಿ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಹಣವನ್ನು ಕೇಳುವ ಅಧಿಕಾರಿ-ಸಿಬ್ಬಂದಿಗಳಿಗೆ ಬುದ್ದಿ ಕಲಿಸಲು ಜನರು ಲೋಕಾಯುಕ್ತ ಸಂಸ್ಥೆಯ ಮುಂದೆ ಬಂದಾಗ ಅವರಿಗೆ ನ್ಯಾಯ ಸಿಗುವುದು ಗ್ಯಾರಂಟಿ ಇಲ್ಲದಂತಾಗಿದೆ. ಇತಂಹ ಪರಿಸ್ಥಿತಿ ಇಡೀ ರಾಜ್ಯದಲ್ಲಿ ಆವಾರಿಸಿದ್ದು, ಲೋಕಾಯುಕ್ತ ಸಂಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಸ್ವಚ್ಚಗೊಳಿಸಬೇಕಿದೆ. ಇಲಾಖೆಯಲ್ಲಿ ಬೇರೂರಿರುವ ಭ್ರಷ್ಟ ಅಧಿಕಾರಿಗಳನ್ನು ಸಂಸ್ಥೆಯಿAದ ಹೊರ ಹಾಕುವ ಮೂಲಕ ಧಕ್ಷ ಹಾಗೂ ಪ್ರಮಾಣಿಕ ಅಧಿಕಾರಿಗಳು ನೇಮಕ ಮಾಡಿ, ಜನರಿಗೆ ಉತ್ತಮ ಸೇವೆಯನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸುಬಾನ್ ಹಂಗಲೂರು, ನಿರುಪಾದ ಆರ್. ಗೋಸುಪ್ಪಿ, ವೆಂಕಟರಮಣ, ಅಂಜಿನಿ, ವೀರೇಂದ್ರ, ಕೃಷ್ಣ, ಟಿ. ನಜೀರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net