

ಹೊಸಪೇಟೆ: ತಮಿಳುನಾಡು ಚೆನೈನಲ್ಲಿ ಮೇ.23 ರಂದು ನಡೆಯುವ ನಾಷನಲ್ ಸೌತ್ ಜೊನ್ ಪವರ್ ಲಿಪ್ಟಿಂಗ್ ಸ್ಪರ್ದೇಗೆ ನಗರದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕೆ.ಎಸ್.ದೀಪಕ್ ಆಯ್ಕೆ ಆಗಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ರಾಜ್ಯದ ನಾನಾ ಕಡೆಯ ಇಂಜಿನಿಯರ್ ಕಾಲೇಜುಗಳ ಪವರ್ ಲಿಪ್ಟಿಂಗ್ ಸ್ಪರ್ದೇ ನಡೆಸಿತು. ಈ ಪೈಕಿ ರಾಜ್ಯದ 11 ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆ.ಎಸ್.ದೀಪಕ್ ಕೂಡ ಚಿನ್ನ ಪಡೆದು ನಾಷನಲ್ ಸೌತ್ ಜೊನ್ ಪವರ್ ಲಿಪ್ಟಿಂಗ್ ಸ್ಪರ್ದೇಗೆ ಆಯ್ಕೆಯಾದರು.