ಬಾಲಕೀಯರಿಗೆ ಮುಟ್ಟಿನ ಜಾಗೃತಿಯಾಗಲಿ

news
ಕನ್ನಡ ವಿವಿಯಲ್ಲಿ ಯೋಗ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಸೃಷ್ಠಿಯಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
Published on

ಹೊಸಪೇಟೆ: ಜೀವಸೃಷ್ಟಿಯ ಮೂಲಕ್ರಿಯೆಯಾದ ಮುಟ್ಟು, ಒಂದು ಜೈವಿಕ ಕ್ರಿಯೆಯಾಗಿದೆ eಒಜu ಕನ್ನಡ ವಿವಿಯ ವೈದ್ಯಾಧಿಕಾರಿ ಡಾ.ಯು.ರಾಜರಾಜೇಶ್ವರಿ ಹೇಳಿದರು.

ಕನ್ನಡ ವಿವಿಯ ರಾಷ್ಟಿçÃಯ ಸೇವಾ ಯೋಜನೆ ಘಟಕ ಹಾಗೂ ಅಭಿವೃದ್ಧಿ ಅಧ್ಯಯನ ವಿಭಾಗದಿಂದ ನುಡಿಕಟ್ಟಡದಲ್ಲಿ ಗುರುವಾರ ಯುನಿಸೆಫ್ ಮುಟ್ಟಿನ ಆರೋಗ್ಯ ನೈರ್ಮಲ್ಯ ದಿನ ನಿಮಿತ ಮುಟ್ಟಿನ ಸ್ನೇಹಿ ಪ್ರಪಂಚದ ಕಡೆಗೆ ಉಪನ್ಯಾಸದಲ್ಲಿ ಮಾತನಾಡಿದರು.

ಮುಟ್ಟಾಗುವುದು ಸಹಜ ಹಾಗೂ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ನಿಜವಾದರೂ ಪ್ರಸ್ತುತ ನೈರ್ಮಲ್ಯ ಅಥವಾ ಸ್ವಚ್ಛತೆ ಕಾಪಾಡಿಕೊಳಲ್ಲು ಗಾಬರಿಯಾಗುವ ಬಾಲಕಿಯರಿಗೆ ಜಾಗೃತಿ ಮೂಡಿಸುವುದು ಮುಖ್ಯ. ಮುಟ್ಟಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಪ್ರಮುಖವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಹೊಟ್ಟೆ ನೋವು, ಮಾನಸಿಕ ಒತ್ತಡ ಮುಂತಾದವುಗಳ ನಿರ್ವಹಣೆಗೆ ಯೋಗಾಸನ, ಧ್ಯಾನ, ಜತೆಗೆ ಪೋಷಕಾಂಶ ಭರಿತ ಗುಣಮಟ್ಟದ ಆಹಾರದ ಸೇವನೆ ಮಾಡಬೇಕು. ಒತ್ತಡದ ನಿರ್ವಹಣೆ, ಕಾಲ ಕಾಲಕ್ಕೆ ಸ್ತಿçÃರೋಗ ತಜ್ಞರ ಸಲಗೆ ಪಡೆಯಬೇಕು ಎಂದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಗೀತಮ್ಮ ಮಾತನಾಡಿ, ಬಡತನ, ಅನಕ್ಷರತೆ, ಲಿಂಗತ್ವ, ಮೂಢನಂಬಿಕೆ ಕಾರಣದಿಂದಾಗಿ ಮಾಹಿತಿಯ ಕೊರತೆ ಇದೆ. ಆದ್ದರಿಂದ ಅರಿವು ಮೂಡಿಸಬೇಕಾಗಿದೆ. ಮುಟ್ಟಿನ ಸಮಯದಲ್ಲಿ ಅನುಭವಿಸುವ ದೈಹಿಕ ಹಿಂಸೆಗೆ ಕುಟುಂಬದಲ್ಲಿ ಪುರುಷರು ಸಹನೆಯಿಂದ ಅವರೊಂದಿಗೆ ವರ್ತಿಸಬೇಕು. ಮುಟ್ಟಿನ ಸಂದರ್ಭದಲ್ಲಿ ಬಳಸುವ ಉತ್ಪನ್ನಗಳನ್ನು ಬಳಸಿದ ನಂತರ ಸೂಕ್ತ ವಿಲೇವಾರಿ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯಬೇಕು ಎಂದರು.

ವಿವಿಯ ಉಪಕುಲಸಚಿವ ಡಾ.ಎ.ವೆಂಕಟೇಶ್ ಅಧ್ಯಕ್ಷತೆ ವಹಿಸಿದರು. ಎನ್‌ಎಸ್‌ಎಸ್ ಸಂಚಾಲಕ ಡಾ.ಎ.ಶ್ರೀಧರ್, ಮಾಹಿತಿಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ, ಅಧ್ಯಾಪಕರಾದ ಜ್ಯೋತಿ, ಕೆ.ಪದ್ಮಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net