ಶೂ ಎಸೆದ ವಕೀಲನನ್ನು ಬಂಧಿಸಿ

13 MANJU 03
Published on

ಹೊಸಪೇಟೆ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿರುವುದನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ವಿಜಯನಗರ ಜಿಲ್ಲಾ ಸಂವಿದಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಅದಕ್ಕೂ ಮುನ್ನ ನಗರದ ಮಾಡ್ರನ್ ವೃತ್ತದಿಂದ, ಪುತ್‌ರಾಜ್‌ಕುಮಾರ್ ಮಾರ್ಗವಾಗಿ ಅಂಬೇರ‍್ಕರ್ ವೃತ್ತದ ವರೆಗೆ ಸಮಾವೇಶಗೊಂಡಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮನುವಾದಿ ವಕೀಲ ರಾಜೇಶ್ ಕಿಶೋರ್‌ಗೆ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎಸಿ ವಿಭಾಗದ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಮಾತನಾಡಿ, ಹಿರಿಯ ವಕೀಲನೊಬ್ಬ ಸಿಜೆಐ ಮೇಲೆ ವಕೀಲ ಶೂ ಎಸೆದಿರುವುದು ಆಕಸ್ಮಿಕವಲ್ಲ, ಅದರ ಹಿಂದೆ ಕಾಣದ ಕೈಗಳ ಪಿತೂರಿಯಿದೆ. ದೇಶದಲ್ಲಿ ಕೋಮುವಾದಿ ಹೇರುವವರು ನಾಚಿಕೆಪಡಬೇಕು. ವಿಶ್ವಗುರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಗತ್ತಿನ ಎದುರು ಭಾರತ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ದುರಂತ ಎಂದರೆ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಜನರ ಪರವಾಗಿ ಹೋರಾಟ ಮಾಡುವವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಜನದ್ರೋಹಿ ಕೆಲಸ ಮಾಡುವವರನ್ನು ರಕ್ಷಿಸಲಾಗುತ್ತದೆ. ಕರ್ನಾಟಕದ ಹೈಕೋರ್ಟ್ಗೆ ಮೊಟ್ಟ ಮೊದಲು ತಳ ಸಮುದಾಯದ ನ್ಯಾಯಮೂರ್ತಿ ಭೀಮಯ್ಯ ಅವರನ್ನು ಅಧಿಕಾರ ಸ್ವೀಕಾರ ಮಾಡಲು ಬಿಟ್ಟಿರಲಿಲ್ಲ. ದೇಶದಲ್ಲಿ ಮನುವಾದಿ ಶಕ್ತಿಗಳು ಸಂವಿಧಾನದ ಮೇಲೆ ದಾಳಿ ಮಾಡುತ್ತಿವೆ. ಮತಗಳನ್ನು ಕದಿಯುವ ಮೂಲಕ ಅಧಿಕಾರಕ್ಕೆ ಬರುತ್ತಿವೆ. ಸಂವಿಧಾನ ವಿರೋಧಿ, ಕೋಮುವಾದಿಗಳನ್ನು ತಿರಸ್ಕಾರ ಮಾಡುವುದು ನಮ್ಮ ಮುಂದೆ ಇರುವ ತೀರ್ಮಾನವಾಗಿದೆ ಎಂದು ಪ್ರತಿಭಟನಕಾರರು ವಾಗ್ದಾಳಿ ನಡೆಸಿದರು.

ಮರಡಿ ಜಂಬಯ್ಯ ನಾಯಕ, ಪೀರ್ ಬಾಷ , ತಾಯಪ್ಪ ನಾಯಕ, ಜೆ.ಶಿವಕುಮಾರ್, ವೆಂಕಟೇಶ, ಕೆ.ಎಂ.ಸAತೋಷ, ರಾಮಚಂದ್ರ, ಸದ್ದಾಂ ಹುಸೇನ್, ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net