

ಹೊಸಪೇಟೆ: ತಾಲೂಕಿನ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಮೀನುಗಳುತ್ತು ದಡ ಸೇರುತ್ತಿವೆ, ಆದರೆ ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ.
ಕಮಲಾಪುರದ ಹೊರ ಭಾಗದಲ್ಲಿ ವಿಜಯನಗರ ಅರಸರ ಕಾಲದಲ್ಲಿಯೇ ಕೆರೆಯೂ 700ಕ್ಕೂ ಅಧಿಕ ಎಕರೆ ಪ್ರದೇಶವನ್ನು ಹೊಂದಿದೆ. ಮುಂಗಾರು ಮಳೆ ಉತ್ತಮವಾಗಿದ್ದು, ಕೆರೆಗೆ ಸಾಕಷ್ಟು ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯದ ಬಸವಣ್ಣ ಕಾಲೂವೆ ಹಾಗೂ ಮಳೆ ನೀರು ಕೆರೆಗೆ ಬರುತ್ತದೆ. ಕೆರೆಗೆ ನೀರು ಬರುತ್ತಿದ್ದು ಇತ್ತೀಚೆಗೆ ಕೆರೆ ಕೋಡಿ ಬಿದ್ದಿದೆ. ಶುಕ್ರವಾರ ಈ ವೇಳೆ ಕೆರೆಯಲ್ಲಿದ್ದ ಮೀನುಗಳು ಸಾವಿಗೀಡಾಗಿರುವುದು ಮೀನುಗಾರರ ಚಿಂತೆಗೆ ಕಾರಣವಾಗಿದೆ. ಕೆರೆಗೆ ನಂಬಿ ಸಾಲ ಸೋಲ ಮಾಡಿ ಮೀನು ಮರಿ ಬಿಡಲಾಗಿತ್ತು. ಕೆರೆ ತುಂಬಿದ್ದರೂ ಮೀನುಗಳು ಸಾಯುತ್ತಿವೆ ಎಂದು ಮೀನುಗಾರರ ಗೋಳಾಡಿದ್ದಾರೆ. ಕೂಡಲೇ ಸ್ಥಳಕ್ಕೆ ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಭೇಟಿ ನೀಡಿದರು.
ಬಸವಣ್ಣ ಕಾಲುವೆ ಮೂಲಕ ತುಂಗಭದ್ರಾ ಜಲಾಶಯದ ನೀರು ಈ ಕೆರೆಗೆ ಬರುವಂತೆ ಅರಸರ ಕಾಲದಲ್ಲೇ ಯೋಜನೆ ರೂಪಿಸಲಾಗಿದೆ. ಆದರೆ, ಈ ಐತಿಹಾಸಿಕ ಕೆರೆಯಲ್ಲಿ ಹೊಸಪೇಟೆ ನಗರದ ಬಹುತೇಕ ಚರಂಡಿ ನೀರು ಸೇರುತ್ತದೆ. ನಿರಂತರವಾಗಿ ಹರಿಯುತ್ತದೆ. ಇನ್ನೂ ಮಳೆ ನೀರಿನೊಂದಿಗೆ ಕಲುಷಿತ ನೀರು ಸೇರಿಕೊಂಡು ಮೀನುಗಳು ಸತ್ತಿರಬಹುದು, ಕೃಷಿಗೆ ಬಳಸುವ ರಾಸಾಯನಿಕ ನೀರಿನಲ್ಲಿ ಸೇರಿಯೂ ಈ ರೀತಿ ಸಾಮೂಹಿಕ ಸಾವು ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಸರ್ಕಾರ ಕೆರೆಯನ್ನು ಸ್ವಚ್ಛವಾಗಿ ಇಡುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.