ಆಳುವ ಸರ್ಕಾರಗಳು ಕಾರ್ಮಿಕರಿಗೆ ರಕ್ಷಣೆ ನೀಡಲಿ

01 MANJU 04
Published on

ಹೊಸಪೇಟೆ: ನಗರದ ಸಿಐಟಿಯುನ ಶ್ರಮಿಕ ಭವನದ ಮುಂದೆ ದುಡಿಯುವ ವರ್ಗದ ಕಾರ್ಮಿಕ ಸೇರಿದಂತೆ ಸೌಹಾರ್ದ ಸಂಘಟನೆಗಳಿAದ ಅಂತರ್ ರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು.

ಜಿಲ್ಲಾ ಸಂಚಾಲಕಿ ಕೆ.ನಾಗರತ್ನ ಮಾತನಾಡಿ, ಆಳುವ ವರ್ಗದ ಸರ್ಕಾರಗಳು ದುಡಿಯುವ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ. ಕಾರ್ಪೊರೇಟ್ ಬಂಡವಾಳದಾರರಿಗೆ ಬೇಕಾದ ನೆರವು ಮತ್ತು ಸಬ್ಸಿಗೆಗಳನ್ನು ಕೊಡುತ್ತಿದೆ. ಸಂಬಳ ಆರೋಗ್ಯ ಪಿಂಚಿಣಿ ಕಂಪನಿಗಳಿಗೆ ಮಾರಾಟವಾಗಿದೆ. ಅದಲ್ಲದೆ ಮಹಿಳೆಯರ ಮೇಲೆ ಮಕ್ಕಳ ಮೇಲೆ ದಾಳಿ, ದಬ್ಬಾಳಿಕೆಗಳ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಳುವ ಸರ್ಕಾರಗಳಿಂದ ರಕ್ಷಣೆ ಇಲ್ಲದಂತಾಗಿದೆ ಎಂದರು.

ಸಿಐಟಿಯುನ ರಾಜ್ಯ ಕಾರ್ಯದರ್ಶಿ ಎಲ್.ಮಂಜುನಾಥ ಮಾತನಾಡಿ, ಮೇ ಒಂದು ಕಾರ್ಮಿಕ ದಿನಾಚರಣೆ ಆಗಬೇಕು ಎಂದರೆ ಎಂಟು ಗಂಟೆಗಳ ಹೋರಾಟದ ಚರಿತ್ರೆ ಹಾಗೂ ದುಡಿಯೋ ವರ್ಗದ ಚಳುವಳಿ ಕಾರಣವಾಗಿದೆ. ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ, ಹೊಸದಾಗಿ ನಾಲ್ಕು ಸಂಹಿತೆ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. 2015ರಲ್ಲಿ ಸಂಸತ್ತಿನಲ್ಲಿ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಿದ್ದು ಪ್ರಜಾಪ್ರಭುತ್ವ ವಿರೋದಿ ಯಾಗಿದೆ. ಕಾರ್ಮಿಕ ವರ್ಗ ಇಲ್ಲದಂತೆ ಮಾಡುವ ಪ್ರಯತ್ನ ಆಗಿದೆ ಎಂದು ಆರೋಪಿಸಿದರು.

ಸಿಐಟಿಯು ತಾಲೂಕು ಸಂಚಾಲಕ ಎಂ.ಗೋಪಾಲ್ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ತಾಲೂಕು ಸಂಚಾಲಕ ಎನ್.ಯಲ್ಲಾಲಿಂಗ, ಪ್ರಮುಖರಾದ ಎಂ.ಜAಬಯ್ಯ ನಾಯಕ, ಕರುಣಾನಿಧಿ, ಜೆ.ಪ್ರಕಾಶ್, ಸೈಯದ್ ಬಸೀರ್ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net