ಕಾರ್ಮಿಕರಿಗೆ ಭವಿಷ್ಯ ನಿಧಿ ಮೀಸಲಿರಸಿ

19 MANJU 05
Published on

ಹೊಸಪೇಟೆ: ವಿವಿಧ ಬೇಡಿಕೆಗಳ ಇಡೇರಿಕೆಗೆ ಒತ್ತಾಯಿಸಿ ಸಿಐಟಿಯುವಿನ ನೇತೃತ್ವದಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಅಂಗನವಾಡಿ ಕೇಂದ್ರಗಳನ್ನು ಮೇರ್ಲ್ಪಜೆಗೇರಿಸಿ, ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಜಾರಿಮಾಡಿ, ಬೆಲೆ ಏರಿಕೆ ಆಧಾರದಲ್ಲಿನ ತುಟಿಭತ್ಯೆಯೊಂದಿಗೆ ಅಕುಶಲ ಕಾರ್ಮಿಕರಿಗೆ ೩೧ ಸಾವಿರ ರೂ. ಹೆಚ್ಚಿಸಬೇಕು. ಕುಶಲ ಕಾರ್ಮಿಕರಿಗೆ ೧೫ ರಷ್ಟು ವೇತನ ಹೆಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ೨೯ ಕಾನೂನುಗಳನ್ನು ೪ ಸಂಹಿತಗಳನ್ನಾಗಿ ಮಾಡುವುದನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಬಾರದು. ಕಟ್ಟಡ ಕಾರ್ಮಕರಿಗೆ ಪೋಷಿಸಿರುವ ಶೈಕ್ಷಣಿಕ, ಮದುವೆಗೆ ಪ್ರೋತ್ಸಾಹಧನ, ವಸತಿ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಗ್ರಾ.ಪಂ. ನೌಕರರಿಗೆ ಕನಿಷ್ಠ ವೇತನ ನೀಡಲು ೩೦೦ ಕೋಟಿ ಮೀಸಲಿಡಬೇಕು. ನಿವೃತ್ತ ವೇತನ ಬಿಡುಗಡೆ ಮಾಡಬೇಕು. ಹಮಾಲಿ, ಬೀದಿ ಬದಿ ವ್ಯಾಪಾರಿಗಳಿಗೆ, ಟೈಲರ್‌ಗಳಿಗೆ, ಮೆಕ್ಯಾನಿಕ್, ಮನೆಕೆಲಸ ಮಹಿಳೆಯರಿಗೆ ಹಾಗೂ ಇತರೆ ಕಾರ್ಮಿಕರಿಗೆ ಭವಿಷ್ಯ ನಿಧಿಗೆ ೫೦೦ ಕೋಟಿ ಬಿಡುಗಡೆÀ ಮಾಡಬೇಕು. ರಾಜ್ಯದಲ್ಲಿ ಜೀವವಿಮಾ ಪ್ರತಿನಿಧಿಗಳನ್ನು ರಾಜ್ಯ ಸರ್ಕಾರದ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗೆ ಸೇರ್ಪಡೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ವಾರ್ಷಿಕ ೨೦೦ ದಿನಗಳ ಕೆಲಸ ಹಾಗೂ ೭೦೦ ರೂ. ವೇತನ ನಗರಕ್ಕೆ ವಿಸ್ತರಣೆ ಮಡಬೇಕು. ಎನ್‌ಪಿಎಸ್ ರದ್ದು ಗೊಳಿಸಿ, ಹಳೆಯ ಪಿಂಚಣಿ ಸ್ಕೀಮ್ ಮರು ಸ್ಥಾಪಿಸಬೇಕು. ಬಿಸಿಯೂಟ ನೌಕರಿಗೆ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಎನ್.ಯಲ್ಲಲಿಂಗ, ಆರ್.ಎಸ್.ಬಸವರಾಜ್ ಎಂ.ಗೋಪಾಲ್, ಕೆ.ನಾಗರತ್ನ, ಕೆ.ಎಂ.ಸಂತೋಷ್, ಎಸ್.ಜಗನ್ನಾಥ, ಹೇಮಂತ್‌ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net